More

    ಪುತ್ಥಳಿ ನಿರ್ಮಾಣ ಅಭಿಮಾನದ ಸಂಕೇತ

    ಹರಿಹರ: ಪುನೀತ್ ರಾಜಕುಮಾರ ಪುತ್ಥಳಿ ನಿರ್ಮಿಸುತ್ತಿರುವುದು ಜನರು ಅವರ ಮೇಲಿನ ಅಭಿಮಾನದ ಸಂಕೇತ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಅಭಿಪ್ರಾಯಪಟ್ಟರು.

    ಇಂದಿರಾ ನಗರದ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುನೀತ್ ರಾಜ್‌ಕುಮಾರ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಪುನೀತ್ ಚಿಕ್ಕ ವಯಸ್ಸಿನಲ್ಲೇ ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆ ಮಾಡಿ, ಜನರ ಅಭಿಮಾನ ಗಳಿಸಿರುವುದು ಸಂತಸ ಸಂಗತಿ. ಪುನೀತ್ ಮೇಲೆ ನಾಡಿನ ಜನರು ಇಟ್ಟಿರುವ ಅಭಿಮಾನಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

    ಪುನೀತ್ ನಿಧನ ಅಭಿಮಾಪುತ್ಥಳಿ ನಿರ್ಮಾಣ ಅಭಿಮಾನದ ಸಂಕೇತನಿಗಳಿಗೆ ಅತ್ಯಂತ ದುಖದ ಸಂಗತಿ. ಅದನ್ನು ಮರೆಯಲು ಅವರ ಪುತ್ಥಳಿ ನಿರ್ಮಿಸುತ್ತಿದ್ದಾರೆ. ಆದರೆ, ತಮಗೆ ಪುನೀತ್ ಬದುಕಿದ್ದಾಗ ಅವರಿಗೆ ಹಾರ ಹಾಕಲು ಸಂತೋಷವಾಗುತ್ತಿತ್ತು. ಆದರೀಗ ಅವರಿಲ್ಲದೆ, ಅವರ ಪುತ್ಥಳಿಗೆ ಹಾರ ಹಾಕಲು ದುಃಖ ಆಗುತ್ತದೆ ಎಂದರು.

    ನಟ ವಿಕ್ರಮ್ ರವಿಚಂದ್ರನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮಾ ಹರೀಶ್, ಸಂಗೀತ ನಿರ್ದೇಶಕ ರಾಜೇಶ ರಾಮನಾಥ್, ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ ಹರೀಶ, ಜಿಪಂ ಮಾಜಿ ಅಧ್ಯಕ್ಷ ಎ.ಗೊವಿಂದರೆಡ್ಡಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ಹನಗವಾಡಿ ವೀರೇಶ್, ಮುಖಂಡ ಚಂದ್ರಶೇಖರ ಪೂಜಾರ ಮಾತನಾಡಿದರು.

    ದಾವಣಗೆರೆ ಮಹಾನಗರ ಪಾಲಿಕೆಯ ಮಹಾಪೌರ ವಿನಾಯಕ ಪೈಲ್ವಾನ್, ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ, ಪುನೀತ್ ಅಭಿಮಾನಿ ಬಳಗದ ಸಿದ್ದು ಬೇಡರ, ಮಾರುತಿ ಬೇಡರ, ವಾಗೀಶ ಬನ್ನಿಕೊಡ, ವಕೀಲರಾದ ಚಿಂಚೊಳ್ಳಿ ಮಂಜುನಾಥ, ಜಿಗಳಿ ಶ್ಯಾಮ್, ಚಲನಚಿತ್ರ ನಿರ್ಮಾಪಕ ನಾಗೇಂದ್ರ, ನಗರಸಭೆಯ ಸದಸ್ಯರಾದ ಶಂಕರ ಖಟಾವಕರ, ರಜನಿಕಾಂತ, ಕವಿತಾ ಬೇಡರ, ನಾಗರತ್ನಮ್ಮ, ಪಾರ್ವತಮ್ಮ, ರುದ್ರಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts