More

    ಹರಿಹರೇಶ್ವರ ಸನ್ನಿಧಾನದಲ್ಲಿ ಎಲೆಕ್ಷನ್ ಫೀವರ್

    ಹರಿಹರ: ಕ್ಷೇತ್ರದಲ್ಲಿ ಇರುವ ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ.18ರಷ್ಟಿರುವ ಯುವ ಮತದಾರರ ನಡೆಯ ಮೇಲೆ ಈ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶ ನಿರ್ಧಾರವಾಗಲಿದೆ ಎನ್ನುವ ಚರ್ಚೆ ತಾಲೂಕಿನಾದ್ಯಂತ ಹರಿದಾಡುತ್ತಿದೆ.

    ವಿಧಾನಸಭೆ ಚುನಾವಣೆಗೆ ಈಗಾಗಲೇ ತಾಲೂಕಿನಲ್ಲಿ ಎಲೆಕ್ಷನ್ ಜ್ವರ ಆರಂಭವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಚುನಾವ ತಾಲೂಕಿನಲ್ಲಿ 2,03,000ಕ್ಕೂ ಹೆಚ್ಚು ಮತದಾರರಿದ್ದು ಪುರುಷ ಹಾಗೂ ಮಹಿಳೆಯರು ಸಮವಾಗಿದ್ದಾರೆ. ಅಣಾ ಆಯೋಗದ ಮಾಹಿತಿಯಂತೆ ಈ ಬಾರಿಲ್ಲದೇ 19 ಮಂದಿ ತೃತೀಯ ಲಿಂಗಿಗಳು ಸಹ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

    ಹರಿಹರ ವಿಧಾಹರಿಹರೇಶ್ವರ ಸನ್ನಿಧಾನದಲ್ಲಿ ಎಲೆಕ್ಷನ್ ಫೀವರ್ನಸಭೆ ಕ್ಷೇತ್ರದಲ್ಲಿ ಪ್ರತಿ ಬಾರಿ ಅನುಕಂಪ ಅಥವಾ ಜಾತಿ ಆಧಾರದಲ್ಲಿ ಫಲಿತಾಂಶ ನಿರ್ಧಾರವಾಗುತ್ತಿರುವುದು ವಿಶೇಷ. ಅಲ್ಲದೆ ಈ ಕ್ಷೇತ್ರದಲ್ಲಿ ಇತ್ತೀಚಿನ ಎರಡು ದಶಕಗಳಿಂದ ಯಾರೂ ಪುನರಾಯ್ಕೆಯಾದ ಉದಾಹರಣೆಯಿಲ್ಲ.

    ಈ ಬಾರಿ ಅಂತಿಮ ಮತದಾರರ ಕರಡು ಪ್ರತಿಯ ಪ್ರಕಾರ 2 ಲಕ್ಷಕ್ಕೂ ಅಧಿಕ ಮತದಾರರಲ್ಲಿ 18 ರಿಂದ 29 ವರ್ಷದೊಳಗಿನ ಮತದಾರರ ಸಂಖ್ಯೆ 44 ಸಾವಿರಕ್ಕೂ ಹೆಚ್ಚು. ಅದರಲ್ಲೂ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿರುವವರು ಅಂದಾಜು 4 ಸಾವಿರದಷ್ಟಿದ್ದಾರೆ.

    ಒಟ್ಟು ಮತದಾರರಲ್ಲಿ ಶೇ.18ರಷ್ಟಿರುವ ಯುವಜನರು ಯಾವುದೇ ಜಾತಿ, ಪಂಗಡ ಆಸೆ ಆಮಿಷಗಳಿಗೆ ಮತ್ತು ಸುಳ್ಳು ಭರವಸೆಗಳಿಗೆ ಬೆಲೆ ನೀಡದೇ ಅಭಿವೃದ್ಧಿ, ಮೂಲ ಸೌಕರ್ಯ, ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಮತ ಚಲಾಯಿಸಿದರೆ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಯುವಕರೇ ಟಾರ್ಗೆಟ್: ತಾಲೂಕಿನ ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಆಕಾಂಕ್ಷಿಗಳು ಈಗಾಗಲೇ ಯುವಕರನ್ನು ಸೆಳೆಯಲು ಕ್ರಿಕೆಟ್ ಪಂದ್ಯಾವಳಿ, ಕುಸ್ತಿ, ಕಬಡ್ಡಿ, ವಾಲಿಬಾಲ್ ಹಾಗೂ ಕುರಿ ಕಾಳಗದಂತಹ ಅನೇಕ ಕ್ರೀಡೆಗಳನ್ನು ಹಾಗೂ ಸಭೆ ಸಮಾರಂಭಗಳನ್ನು ಆಯೋಜಿಸುತ್ತಿದೆ. ಅಥವಾ ಆಯೋಜಕರಿಗೆ ಆರ್ಥಿಕ ನೆರವು ನೀಡುತ್ತಿವೆ.

    ವಿವಿಧ ರಾಜಕೀಯ ಪಕ್ಷದ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ತಮ್ಮದೇ ಆದ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದಾರೆ. ಕ್ಷೇತ್ರದ ಯುವ ಮತದಾರರು ಯಾವ ರೀತಿ ತಮ್ಮ ಹಕ್ಕು ಚಲಾಯಿಸುತ್ತಾರೆ ಹಾಗೂ ಈ ಕ್ಷೇತ್ರದ ಇತಿಹಾಸ ಬದಲಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts