More

    ಭೂಮಿ ಬರೆಸಿಕೊಡುವಂತೆ ಕಿರುಕುಳ; ನವವಿವಾಹಿತೆ ಆತ್ಮಹತ್ಯೆ

    ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಹದೇವಪುರದ ಸಿಂಗಯ್ಯನಪಾಳ್ಯ ನಿವಾಸಿ ಅನುಷಾ (23) ಮೃತೆ. ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಅನುಷಾ ಪತಿ ಪ್ರವೀಣ್, ಆತನ ತಾಯಿ ನಾಗಮ್ಮ, ಸೋದರ ಮಾವ ರಾಜೇಶ್, ದೊಡ್ಡಪ್ಪ ತಿಮ್ಮೇಗೌಡ ಮತ್ತು ಇವರ ಮಗ ಮಹೇಶ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಗದೂರು ಗ್ರಾಮದ ಅನುಷಾ ಮತ್ತು ಪಕ್ಕದ ಊರಿನ ಪ್ರವೀಣ್. ಈಕೆ ಪಿಯುಸಿ ವ್ಯಾಸಂಗ ಮಾಡಿದ್ದರೆ, ಪ್ರವೀಣ್ ಮಹದೇವಪುರದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡು ಸಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದ. ಊರಿಗೆ ಹೋಗಿಬರುವುದನ್ನು ಮಾಡುತ್ತಿದ್ದ. ಒಂದು ವರ್ಷದಿಂದ ಅನುಷಾ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಈಕೆ ಪಾಲಕರ ವಿರೋಧದ ನಡುವೆಯೂ 2 ತಿಂಗಳ ಹಿಂದೆ ಮನೆ ಬಿಟ್ಟು ಬಂದು ಪ್ರವೀಣ್ ಜತೆ ಮದುವೆ ಆಗಿ ಸಿಂಗಯ್ಯನಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇವರ ಜತೆಗೆ ಪ್ರವೀಣ್ ತಾಯಿ ನಾಗಮ್ಮ ಇದ್ದರು. ಅನುಷಾ ಮನೆಯಲ್ಲೇ ಇದ್ದಳು.

    ಕೆಲವೇ ದಿನಕ್ಕೆ ಅತ್ತೆ ಮನೆಯವರು ವರದಕ್ಷಿಣೆ ತರುವಂತೆ ಕಿರುಕುಳ ಶುರು ಮಾಡಿದ್ದರು. ನೊಂದ ಅನುಷಾ, ಪಾಲಕರಿಗೆ ವಿಷಯ ತಿಳಿಸಿದಾಗ ಮಂಡ್ಯ ಜಿಲ್ಲೆ ಹಲಗೂರು ಠಾಣೆಗೆ ದೂರು ನೀಡಿದ್ದರು. ಎರಡು ಕುಟುಂಬಸ್ಥರನ್ನು ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಆದರೂ, ಪ್ರವೀಣ್ ಕಿರುಕುಳ ತಪ್ಪಲಿಲ್ಲ. ಅನುಷಾ, ತನ್ನ ತಾಯಿಗೆ ಕರೆ ಮಾಡಿ ನನ್ನ ಪಾಲಿನ ಚಿನ್ನಾಭರಣ, ಜಮೀನು ಕೊಡುವಂತೆ ಕೇಳಿದ್ದಳು. ಇದಕ್ಕೆ ತಾಯಿ ಸಹ ಒಪ್ಪಿದ್ದರು. ಇದರ ನಡುವೆ ಶನಿವಾರ ಸಂಜೆ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಅನುಷಾ ಅತ್ಮಹತ್ಯೆಕೊಂಡಿದ್ದಾಳೆ.

    ಅತ್ತೆ ನಾಗಮ್ಮ ರೂಮ್‌ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ವೈದೇಹಿ ಆಸ್ಪತ್ರೆಗೆ ಅನುಷಾ ಶವ ಸಾಗಿಸಿ ಊರಿನವರಿಗೆ ವಿಷಯ ತಿಳಿದ ಪ್ರವೀಣ್ ಆತನ ತಾಯಿ ಪರಾರಿ ಆಗಿದ್ದರು. ಘಟನಾ ಸ್ಥಳದಲ್ಲಿ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಮೃತರ ಪೋಷಕರು, ಅಳಿಯ ಪ್ರವೀಣ್ ಮತ್ತು ಅವರ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts