More

    ಮಾನಸಿಕ ಅಸ್ವಸ್ಥನನ್ನು ಮಕ್ಕಳ ಕಳ್ಳನೆಂದ ಗ್ರಾಮಸ್ಥರು

    ಹರಪನಹಳ್ಳಿ: ಮಾನಸಿಕ ಅಸ್ವಸ್ಥನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಶೃಂಗಾರತೋಟದಲ್ಲಿ ಶನಿವಾರ ನಡೆದಿದೆ.

    ಘಟನೆ ವಿವರ: ಬೆಳಗ್ಗೆ ಪ್ರಾರ್ಥನೆ ಸಮಯವಾದರೂ ಶಿಕ್ಷಕರು ಒಬ್ಬರೂ ಆಗಮಿಸಿರಲಿಲ್ಲ. ಈ ವೇಳೆ ಗ್ರಾಮದ ಸರ್ಕಾರಿ ಶಾಲೆ ಪ್ರವೇಶಿಸಿರುವ ಮಾನಸಿಕ ಅಸ್ವಸ್ಥ, ಆಟದ ಸಾಮಾನು ತೋರಿಸಿ ಮಕ್ಕಳು ಹೆದರುವಂತೆ ಮಾಡಿದ್ದಾನೆ. ವಿಷಯ ತಿಳಿದು ಶಾಲೆ ಬಳಿಗೆ ಧಾವಿಸಿದ ಗ್ರಾಮಸ್ಥರು, ಆತನನ್ನು ಹಿಡಿದು ಹರಪನಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥ, ಹೂವಿನಹಡಗಲಿ ತಾಲೂಕಿನ ತಾಂಡಾವೊಂದರ ನಿವಾಸಿಯೆಂದು ತಿಳಿದಿದೆ. ಬಳಿಕ ಕುಟುಂಬದವರು ಠಾಣೆಗೆ ತೆರಳಿ ಆತನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಕರೆದೊಯ್ದಿದ್ದಾರೆ.

    ಸಭೆ: ಘಟನೆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹಾಗೂ ಸಿಆರ್‌ಪಿ ಪ್ರಶಾಂತ ಶಾಲೆಗೆ ಆಗಮಿಸಿ ಶಿಕ್ಷಕರು ಹಾಗೂ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರೊಂದಿಗೆ ಸಭೆ ನಡೆಸಿದರು. ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು. ಯಾವ ಮಕ್ಕಳಿಗೂ ಊಟದ ಕೊರತೆಯಾಗದಂತೆ ಕ್ರಮವಹಿಸಬೇಕು. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೋರಿ ಬಿಇಒ ಸಮಸ್ಯೆ ತಿಳಿಗೊಳಿಸಿದರು.

    ಪಿಎಸ್‌ಐ ಸಿ.ಪ್ರಕಾಶ್ ಮಾತನಾಡಿ, ಮಕ್ಕಳ ಕಳ್ಳ ಎಂದು ಸುಳ್ಳುಸುದ್ದಿ ಹಬ್ಬಿಸಬಾರದು. ಅನುಮಾನಾಸ್ಪದ ವ್ಯಕ್ತಿ ಕಂಡು ಬಂದಲ್ಲಿ ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts