More

    ನೈತಿಕ ಮೌಲ್ಯ ಹೊಂದಿದ್ದವರೇ ಯೋಗ್ಯವಾದ ರಾಜಕಾರಣಿ – ಹಿರೇಹಡಗಲಿಯ ಅಭಿನವ ಶ್ರೀ ಹಾಲಸ್ವಾಮಿ ಅಭಿಮತ

    ಹರಪನಹಳ್ಳಿ: ನೈತಿಕ ಮೌಲ್ಯ ಹೊಂದಿದ್ದವರು, ಸಾಮಾಜಿಕ ಚಿಂತನೆ, ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಹೊಂದಿರುತ್ತಾರೆ.ಅವರೇ ನಿಜವಾದ ಸೇವಕರಾಗಿದ್ದು, ಯೋಗ್ಯವಾದ ರಾಜಕಾರಣಿಯಾಗಿರುತ್ತಾರೆ ಎಂದು ಹಿರೇಹಡಗಲಿಯ ಅಭಿನವ ಶ್ರೀ ಹಾಲಸ್ವಾಮಿ ಹೇಳಿದರು.

    ತಾಲೂಕಿನ ಮಾಡಲಗೇರಿ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಮಂಗಳವಾರ ಶ್ರೀ ಆಂಜನೇಯ ಗ್ರಾಮೀಣ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಸಂಘ ಮತ್ತು ತಾಲೂಕು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ ಕಲಾವಿದರ ಗುರುತಿನ ಚೀಟಿ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಪ್ರತಿಷ್ಠೆಗಾಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದು, ಅದರಿಂದ ಹೊರಗೆ ಬಂದು ಕಲೆ, ಸಾಹಿತ್ಯ ಉಳಿಸಿ, ಪ್ರೋತ್ಸಾಹಿಸಬೇಕಾಗಿದೆ. ಪ್ರಸ್ತುತ ಆರೋಗ್ಯದ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಕಾರಣ, ಅತಿಯಾದ ರಾಸಾಯನಿಕ ಬಳಕೆ ಮಾಡಿ ಬೆಳೆ ಬೆಳೆದು ಆಹಾರ ತಿನ್ನುತ್ತಿದ್ದೇವೆ. ಇನ್ನಾದರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಠಿಯಿಂದಲಾದರೂ ರೈತರು ಸಾವಯವ ಕೃಷಿ ಮಾಡಿಕೊಂಡು ಆರೋಗ್ಯ, ಆಯಸ್ಸು ಹೆಚ್ಚಿಸಿಕೊಳ್ಳಿ ಎಂದರು.

    ಜಿಲ್ಲಾ ಅಧ್ಯಕ್ಷ ರಮೇಶ ಹಂಚಿನಮನಿ ಮಾತನಾಡಿ, ಕಲಾವಿದರೂ ಸಂಕಷ್ಟದಲ್ಲಿದ್ದಾರೆ. ಅವರಿಗೆ ಮಾಸಾಶನ ಹೆಚ್ಚಳ, ಬಸ್‌ಪಾಸ್ ನೀಡಬೇಕು. ವಯೋಮಿತಿ ಇಳಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಾಲೂಕಿಗೊಂದರಂತೆ ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿಗಳನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಜಿಲ್ಲಾ ಕಾರ್ಯದರ್ಶಿ ನಾಗರಾಜ, ತಾಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಕಾರ್ಯದರ್ಶಿ ಪಿ.ಕರಿಬಸಪ್ಪ, ಹಡಗಲಿ ತಾಲೂಕು ಅಧ್ಯಕ್ಷ ಎಂ.ಬನ್ನೆಪ್ಪ, ಸೋಗಿ ನಾಗರತ್ನಮ್ಮ, ನಾಗರಾಜ, ಉಮಾಶಂಕರ ಮಾತನಾಡಿದರು. ಮಕ್ಕಳು ಹಾಗೂ ಕಲಾವಿದರಿಂದ ಕೋಲಾಟ, ಜನಪದ ಗೀತೆ, ಲಾವಣಿ ಹಾಡು, ಸೋಬಾನ ಪದಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಜಿಲ್ಲಾ ಸದಸ್ಯ ಪಿ.ಶಂಭುಲಿಂಗನಗೌಡ, ತಾಲೂಕು ಸಂಘಟನಾ ಕಾರ್ಯದರ್ಶಿ ಆರ್.ವೆಂಕಟೇಶ್, ಗ್ರಾಪಂ ಅಧ್ಯಕ್ಷೆ ನಿರ್ಮಲಾ, ಗ್ರಾಪಂ ಸದಸ್ಯ ಬಣಕಾರ ಕೆಂಚಪ್ಪ, ಟಿ.ನಾಗೇಂದ್ರಪ್ಪ, ಶಾಲಾ ಮುಖ್ಯಶಿಕ್ಷಕಿ ಹೇಮಾವತಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಮಂಜುನಾಥ, ವೈ.ನಾಗಮ್ಮ, ಓಂಕಾರಪ್ಪ, ಕೆ.ತಿರುಪತಿ, ಶಿವಕುಮಾರ, ಟಿ.ರಾಜಪ್ಪ, ಟಿ.ಸುನಿಲ್, ಎಸ್ ನಾಗರಾಜಪ್ಪ, ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts