More

    ಬಂಧಿಖಾನೆ ಕೈದಿಗಳ ಮನಪರಿವರ್ತನೆ ಕೇಂದ್ರ

    ಹರಪನಹಳ್ಳಿ: ಅಪರಾಧಿಗಳು ಶಿಕ್ಷೆಗೊಳಗಾಗಿ ಬಂಧಿಖಾನೆಗೆ ಬಂದಾಗ, ಪಶ್ಚತ್ತಾಪ ಪಡುವ ಬದಲು ಮನಪರಿವರ್ತನೆ ಮಾಡಿಕೊಂಡು ಉತ್ತಮ ಪ್ರಜೆಯಾಗಿ ಹೊರಬರಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಸಲಹೆ ನೀಡಿದರು.

    ತಾಲೂಕಿನ ಕಾಂಭಟ್ರಹಳ್ಳಿ ಸಮೀಪದ ತಾಲೂಕಿನ ಉಪಕಾರಗೃಹದಲ್ಲಿ ಶುಕ್ರವಾರ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಕಾನೂನು ಅರಿವಿನ ಕೊರತೆಯಿಂದ ತಪ್ಪುಗಳು ನಡೆಯುತ್ತವೆ. ನಂತರ ಶಿಕ್ಷೆಗೊಳಗಾಗಿ ಬಂಧಿಖಾನೆಗೆ ಬಂದಾಗ ಮಾನಸಿಕವಾಗಿ ನೊಂದುಕೊಳ್ಳಬಾರದು. ಶಿಕ್ಷೆಯ ಅವಧಿಯಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

    ಸಂವಿಧಾನದಡಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು, ಕರ್ತವ್ಯಗಳಿದ್ದು, ಕಾನೂನಿನಡಿ ಪರಿಹಾರ ಸಿಗಬೇಕು. ಇಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ. ಕಾನೂನಿಡಿಯಲ್ಲಿ ಎಲ್ಲರೂ ಒಂದೇ. ಇತ್ತೀಚಿಗೆ ಮೊಬೈಲ್ ಹಾವಳಿಯಿಂದ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗಿದೆ. ದೇವಸ್ಥಾನಗಳಿಗಿಂತ ಪವಿತ್ರವಾದ ಸ್ಥಳ ಗ್ರಂಥಾಲಯ. ಪ್ರತಿಯೊಬ್ಬರು ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

    ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಮಾತನಾಡಿದರು. ತಾಲೂಕು ಉಪಕಾರಗೃಹದ ಅಧೀಕ್ಷಕ ಕೆ.ಜಿ.ಭಂಡಾರಿ, ವಕೀಲ ವಿ.ಜಿ.ಪ್ರಕಾಶಗೌಡ, ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿರುಪಾಕ್ಷಪ್ಪ, ಕಾರ್ಯದರ್ಶಿ ಕೆ.ಆನಂದ, ವಕೀಲರಾದ ಕಣಿವಿಹಳ್ಳಿ ಮಂಜುನಾಥ, ಬಿ.ರೇವಣಗೌಡ, ರಾಮಭಟ್, ಗ್ರಂಥಾಲಯ ಅಧಿಕಾರಿ ನಾರಾಯಣ ದಾಸ, ಜೆ.ಸೀಮಾ, ಕೆ.ದಾಕ್ಷಾಯಿಣಿ, ಮೇಟಿ ರೇಣುಕಾ, ಹೂಲೆಪ್ಪ, ನಾಗರಾಜ ನಾಯ್ಕ, ಬಿ.ಸಿದ್ದೇಶ, ಮೃತ್ಯುಂಜಯ, ನಾಗೇಂದ್ರಪ್ಪ, ಎಂ.ಸುರೇಶ್, ಗುಡದಯ್ಯ, ಹನುಮಂತ, ಮನೋಹರ, ರಾಜಪ್ಪ, ಸಣ್ಣ ನಿಂಗನಗೌಡ, ಗೀರಿಶ, ಚಂದ್ರಪ್ಪ, ಮಲ್ಲಪ್ಪ, ತಿಪ್ಪೆಶ್ ಇತರರು ಇದ್ದರು.

    ಆರೋಪಿ ಮತ್ತು ಅಪಾರಾಧಿ ಬೇರೆ ಬೇರೆಯಾಗಿದ್ದು, ನಿಮ್ಮ ಮೇಲೆ ಆರೋಪವಿದೆ. ಆರೋಪದಿಂದ ಮುಕ್ತರಾಗಬೇಕು. ಮಾನವ ಹಕ್ಕುಗಳು ಬಂದ ಮೇಲೆ ಬಂಧಿಖಾನೆಯಲ್ಲೂ ಉತ್ತಮ ವಾತವಾರಣವಿದ್ದು, ಜೈಲು ಎಂಬ ಕೀಳರಿಮೆ ಬಿಟ್ಟು ಉತ್ತಮ ವ್ಯಕ್ತಿಗಳಾಗಿ ತಮ್ಮ ಜೀವನ ರೂಪಿಸಿಕೊಳ್ಳಿ.
    ಚಂದ್ರಶೇಖರ ಭಟ್
    , ನ್ಯಾಯಾವಾದಿ

    ಬಂಧಿಖಾನೆಯಲ್ಲಿ ಉತ್ತಮ ವಾತವಾರಣವಿದ್ದು, ಅನಕ್ಷರಸ್ಥ ಕೈದಿಗಳಿಗೆ ಅಕ್ಷರಭ್ಯಾಸ ಮಾಡಿಸಲು ಶಿಕ್ಷಕರ ಅಗತ್ಯವಿದೆ. ದೈನಂದಿನ ಆರೋಗ್ಯಕ್ಕಾಗಿ ಯೋಗ ಶಿಕ್ಷಕರು ಜತೆಗೆ ಮೂಲಭೂತ ಸೌಕರ್ಯಗಳಾದ ಜೈಲು ಮುಂಭಾಗದ ರಸ್ತೆ, ಹೆಚ್ಚುವರಿಯಾಗಿ ಕೊಳವೆಬಾವಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕು.
    ಎಫ್.ಜಿ.ಬಾರಿಕೇರ
    ತಾಲೂಕು ಉಪಕಾರಗೃಹದ ಸಹಾಯಕ ಜೈಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts