More

    ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ವಸತಿ ರಹಿತರಿಂದ 700 ಅರ್ಜಿಗಳು

    ಹರಪನಹಳ್ಳಿ: ಅಣಜಿಗೆರೆ ಗ್ರಾಪಂ ವ್ಯಾಪ್ತಿಯ ವಸತಿ ರಹಿತರಿಗೆ ಮನೆ ನೀಡುವಂತೆ ಒತ್ತಾಯಿಸಿ ಸಿಪಿಐ ಸೋಮವಾರ ಗ್ರಾಪಂ ಪಿಡಿಒ ಪರಮೇಶ್ವರಪ್ಪ ಅವರಿಗೆ ಮನವಿ ಸಲ್ಲಿಸಿತು.

    ಪಕ್ಷದ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸಿಪಿಐ ಇತ್ತೀಚೆಗೆ ಆಯೋಜಿಸಿದ್ದ ಸೂರಿಗಾಗಿ ಕೋಟಿ ಹೆಜ್ಜೆ ಜಾಥಾ ವೇಳೆ ಅಣಜಿಗೆರೆಯ ವಸತಿ ರಹಿತರಿಂದ 700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇತ್ತು. ಆದರೆ, ಸರ್ಕಾರ ಐದಾರು ತಿಂಗಳು ಆ ಸಾಫ್ಟ್‌ವೇರ್‌ನ್ನು ಲಾಕ್ ಮಾಡಿದೆ. ಓಪನ್ ಮಾಡಿ ಮನೆ ನಿರ್ಮಿಸಿಕೊಳ್ಳಲು ಕನಿಷ್ಠ 5 ಲಕ್ಷ ರೂ. ಸಹಾಯಧನ ನೀಡಬೇಕು ಎಂದರು.

    ಪಿಡಿಒ ಪರಮೇಶ್ವರಪ್ಪ ಪ್ರತಿಕ್ರಿಯಿಸಿ, ವಸತಿಗಾಗಿ 700ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆರು ತಿಂಗಳಿಂದ ಲಾಕ್ ಆಗಿದ್ದ ಸಾಫ್ಟ್‌ವೇರ್ ಅನ್ನು ಸರ್ಕಾರ ಈಗ ಓಪನ್ ಮಾಡಿದೆ. ವಸತಿ ರಹಿತರು ಇದೇ ತಿಂಗಳ ಹತ್ತರೊಳಗೆ ಅರ್ಜಿ ಸಲ್ಲಿಸಬಹುದು ಎಂದರು.

    ರಾಜ್ಯ ಸಹ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ಕಿಸಾನ್ ಸಭಾದ ಟಿ.ಎನ್.ಬಸಣ್ಣ, ಗುಡಿಹಳ್ಳಿ ಬಸವರಾಜ್, ಅಖಿಲ ಭಾರತೀಯ ಯುವಜನ ಫೆಡರೇಷನ್‌ನ ಗೋಣೇಶ್, ರಾಜ್ಯ ಸಹ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ಟಿ.ನಾಗರಾಜ್, ತುಂಬಿಗೇರಿ ರುದ್ರೇಶ್, ಮಾದಿಹಳ್ಳಿ ಲಕ್ಷ ್ಮಣ, ಮಹದೇವಪ್ಪ, ಬಿಲ್‌ಕಲೆಕ್ಟರ್‌ಗಳಾದ ಬಂಡೆಪ್ಪ, ದಂಡೆಪ್ಪ, ವಿಶಾಲಾಕ್ಷಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts