More

    ಹ್ಯಾರಡ ಗ್ರಾಮದ ನ್ಯಾಯಬೆಲೆ ಅಂಗಡಿ ಸ್ಥಳಾಂತರಿಸಿ

    ಹೂವಿನಹಡಗಲಿ: ತಾಲೂಕಿನ ಹ್ಯಾರಡ ಗ್ರಾಮದ ನ್ಯಾಯಾಬೆಲೆ ಅಂಗಡಿಯನ್ನು ಕೆ.ವೀರಾಪುರ ಗ್ರಾಮದ ನ್ಯಾಬೆಲೆ ಅಂಗಡಿಗೆ ವಿನಿಯೋಗಗೊಳಿಸುವಂತೆ ಒತ್ತಾಯಿಸಿ ಹ್ಯಾರಡ ಮತ್ತು ಕೆ.ವೀರಾಪುರ ಗ್ರಾಮದ ಗ್ರಾಮಸ್ಥರು ಶನಿವಾರ ತಹಸೀಲ್ದಾರ್ ಕೆ.ಶರಣಮ್ಮ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ

    ದೇವಗೊಂಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಂದಿಹಳ್ಳಿ ಮಹೇಂದ್ರ ಮಾತನಾಡಿ, ಹ್ಯಾರಡ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಪರವಾನಗಿ ಇಲ್ಲದಿದ್ದರೂ ಖಾಸಗಿ ವ್ಯಕ್ತಿಗಳು ಅಸ್ಟೆಂಟ್ ಲಾಗಿನ್ ಸೃಷ್ಠಿಸಿ ಕಾಳಸಂತೆಯಲ್ಲಿ ಪಡಿತರ ದವಸ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ.

    ಈ ಹಿಂದೆ ಶಾಸಕರು ನೀಡಿದ ಶಿಫಾರಸ್ಸಿನಂತೆ ಆಹಾರ ಇಲಾಖೆಯ ಸಿಬ್ಬಂದಿಗಳು ಕೆ.ವೀರಾಪುರ ಸಗ್ರಾಮದ ಸ್ಥಳ ಪರಿಶೀಲನೆ ನಡೆಸಿ ಶಿಪಾರಸ್ಸು ನೀಡಿಬವಂತೆ ಆದೇಶ ಹೊರಡಿಸಿದ್ದರೂ ಆದರೆ ಆಹಾರ ನಿರೀಕ್ಷಕರು ಹ್ಯಾರಡ ಗ್ರಾಮಕ್ಕೆ ಭೇಟಿ ನೀಡದೆ ಅಸಂಬದ್ದ ವರದಿ ಸಲ್ಲಿಸಿದ್ದಾರೆ.

    ಆ ವರದಿಯನ್ನು ತಿರಸ್ಕರಿಸಿ ನಮ್ಮ ವರದಿಯನ್ನು ಸ್ವೀಕರಿಸಿ ನ್ಯಾಯಬೆಲೆ ಅಂಗಡಿಯನ್ನು ಕೆ.ವೀರಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ವಿನಿಯೋಗಗೊಳಿಸಬೇಕು ಎಂದು ಮನವಿ ಮಾಡಿದರು.

    ನಂದಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿ.ಬಿ.ಶಿವಾನಂದ, ಹ್ಯಾರಡಾ ಗ್ರಾಪಂ ಮಾಜಿ ಸದಸ್ಯ ಪಿ.ಹನುಮಂತಪ್ಪ, ಹ್ಯಾರಡ ಗ್ರಾಪಂ ಸದಸ್ಯ ನಾಗರಾಜ, ಗ್ರಾಮಸ್ಥರಾದ ನೀಲಪ್ಪ, ಕರಿಯಪ್ಪ, ಸಿದ್ದಪ್ಪ, ಹಾಲೇಶ, ಗುಡ್ಡಪ್ಪ, ಬಸವರಾಜ, ಚನ್ನಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts