More

    ಗುರು ಒಬ್ಬ ವ್ಯಕ್ತಿ ಅಲ್ಲ್ಲ, ಅದ್ಭುತ ಶಕ್ತಿ

    ಹೂವಿನಹಡಗಲಿ: ಅಕ್ಷರ ಕಲಿಸಿದ ಗುರುಗಳ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿವೃತ್ತ ಶಿಕ್ಷಕ ಹನುಮಂತಪ್ಪ ಕೋಡಬಾಳ ಹೇಳಿದರು.

    ಗುರು ಋಣವನ್ನು ತೀರಿಸಲು ಸಾಧ್ಯವಿಲ್ಲ

    ತಾಲೂಕಿನ ಹ್ಯಾರಡಾ ಪ್ರೌಢಶಾಲೆಯಲ್ಲಿ 2007-2008ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇದನ್ನೂ ಓದಿ: ಶಂಕಿತ ಉಗ್ರರಿಗೆ ವಿದೇಶಿ ಹಣ: ವಿಚಾರಣೆ ವೇಳೆ ಅಕ್ರಮ ಹಣಕಾಸು ವಹಿವಾಟು ಬೆಳಕಿಗೆ

    ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಿ ಜ್ಞಾನ ಬೋಧನೆ ಮಾಡುತ್ತಾರೆ. ಗುರು ವಿವಿಧ ರೂಪದ ಆದರ್ಶಗಳಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿ ನಾಡಿಗೆ ಮತ್ತು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡುವ ಒಬ್ಬ ವಿಶ್ವಮಾನವನಾಗಿದ್ದಾನೆ. ಗುರು ಒಬ್ಬ ವ್ಯಕ್ತಿ ಅಲ್ಲ್ಲ ಅದೊಂದು ಅದ್ಭುತ ಶಕ್ತಿಯಾಗಿದ್ದಾನೆ. ಸಮಾಜ ಹಾಗೂ ತಂದೆ-ತಾಯಿ ಮತ್ತು ಅಕ್ಷರ ಕಲಿಸಿದ ಗುರುಗಳ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
    ಶಿಕ್ಷಕ ದೇವರಾಜ ಅಡವಿ ಮತ್ತು ಗ್ರಾಮದ ಹಿರಿಯರಾದ ನಾಗಲಿಂಗ ಹಾಗೂ ಇತರರು ಮಾತನಾಡಿದರು.

    ಮುಖ್ಯಶಿಕ್ಷಕ ಟಿ.ನಾಗರಾಜ, ಎಸ್.ಚಂದ್ರಪ್ಪ, ನಿವೃತ್ತ ಶಿಕ್ಷಕರಾದ ಸಣ್ಣಪ್ಪ, ಸಿದ್ದಪ್ಪ, ಅನ್ನದಾನಪ್ಪ ಹಾಗೂ ಪ್ರೌಢಶಾಲೆಯ 2007-2008ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts