ಬೆಂಗಳೂರು: ಜೋಗಿ ಪ್ರೇಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೇವಲ ಅವರು ಅವತ್ತವರ ಆಪ್ತರಷ್ಟೇ ಆ ಖುಷಿಯನ್ನು ಅನುಭವಿಸುತ್ತಿಲ್ಲ. ನೆಚ್ಚಿನ ನಿರ್ದೇಶಕನಿಗೆ ಅಭಿಮಾನಿ ವಲಯದಿಂದಲೂ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಇದೆಲ್ಲದರ ಜತೆಗೆ ಹಲವು ಸಿನಿಮಾತಂಡಗಳೂ ಪ್ರೇಮ್ ಜನ್ಮ ದಿನಕ್ಕೆ ಪೋಸ್ಟರ್ ಬಿಡುಗಡೆ ಮಾಡಿಕೊಂಡು, ಶುಭ ಕೋರಿವೆ.
ಇದನ್ನೂ ಓದಿ: ‘ನನಗೆ ಗಂಡು ಮಗುವೇ ಆಗುತ್ತೆ ನೋಡ್ತಿರು’; ಚಿರು ನುಡಿದ ಭವಿಷ್ಯ ನಿಜವಾಯ್ತು ಎಂದ ಧ್ರುವ
ಎಂಎಸ್ಆರ್ ಪ್ರೊಡಕ್ಷನ್ ನ ನೂತನ ಚಿತ್ರದಲ್ಲಿ ಜೋಗಿ ಪ್ರೇಮ್ ನಾಯಕನಾಗಿ ನಟಿಸಲಿದ್ದು, ಜನ್ಮದಿನದ ಪೋಸ್ಟರ್ ಬಿಡುಗಡೆ ಮಾಡಿ, ಶುಭಕೋರಿದೆ. ಅಕ್ಷಯ್ ಸಮರ್ಥ್ ನಿರ್ಮಾಣ ಮಾಡಲಿರುವ ಈ ಚಿತ್ರವನ್ನು ಹೆಚ್.ವಿಜಯಕುಮಾರ್ ನಿರ್ದೇಶಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಸಂಬಂಧಿಸಿದಂತೆ ಮಾಹಿತಿಯನ್ನು ಹೊರಹಾಕಲಿದೆ ತಂಡ.
ಇದನ್ನೂ ಓದಿ: PHOTOS| ಜೂನಿಯರ್ ಚಿರು ಎಕ್ಸ್ಕ್ಲ್ಯೂಸೀವ್ ಫೋಟೋಗಳು ಇಲ್ಲಿವೆ
ಇತ್ತ ಈ ಹಿಂದೆ ಕಲಿ ಶೀರ್ಷಿಕೆಯಲ್ಲಿ ಸಿನಿಮಾ ಮಾಡುವುದಾಗಿ ಪ್ರೇಮ್ ಹೇಳಿಕೊಂಡಿದ್ದರು. ಇದೀಗ ಕಲ್ಕಿ ಚಿತ್ರದಲ್ಲಿ ಸ್ವತಃ ಪ್ರೇಮ್ ನಾಯಕರಾಗಿ ನಟಿಸಲಿದ್ದಾರೆ. ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಆನೆ ಪಟಾಕಿ ಚಿತ್ರ ನಿರ್ಮಾಣ ಮಾಡಿದ್ದ ಸುರೇಶ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ತಮಿಳಿನ ಸ್ಟಾರ್ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ನವೆಂಬರ್ನಲ್ಲಿ ಆ ನಟನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ ತಂಡ. ಇನ್ನು ಗಾಂಧಿಗಿರಿ ಚಿತ್ರ ನಿರ್ದೇಶನ ಮಾಡಿದ್ದ ರಘು ಹಾಸನ್ ಜತೆಗೆ ‘ಕೇಡಿ ಕಿಷ್ಣ’ ಚಿತ್ರದಲ್ಲಿಯೂ ಪ್ರೇಮ್ ನಟಿಸಲಿದ್ದಾರೆ.