More

    ಮಾದಪ್ಪನ ಪೂಜೆ ಭಾಗ್ಯ ಕಳೆದುಕೊಂಡೆವು

    ಹನೂರು: ಜೈಲಿಗೆ ಹೋದ ಸರತಿ ಅರ್ಚಕರು ಮಹದೇಶ್ವರ ಬೆಟ್ಟದ ಗರ್ಭ ಗುಡಿಯಲ್ಲಿ ಮಾದಪ್ಪನ ಪೂಜೆ ಮಾಡಬಾರದೆಂಬ ನಿಯಮ ನಮ್ಮಲ್ಲಿದೆ. ಹೀಗಾಗಿ ನಾವು ಮಾದಪ್ಪನ ಪೂಜೆ ಮಾಡುವ ಭಾಗ್ಯ ಕಳೆದುಕೊಂಡೆವು ಎಂದು ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದ ಎಂ.ಪುಟ್ಟತಂಬಡಿ ಬೇಸರ ವ್ಯಕ್ತಪಡಿಸಿದರು.

    ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ನಡೆದಿದ್ದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಮೊದಲ ಬಾರಿಗೆ ಜೈಲು ನೋಡಿದ ನಾವು ಮಹದೇಶ್ವರರ ಪೂಜೆ ಮಾಡುವ ಭಾಗ್ಯ ಕಳೆದುಕೊಂಡ ದುಃಖವಿದೆ. ಜೈಲಿನಲ್ಲಿದ್ದ ನರಕ, ನೋವನ್ನು ಹೇಳಲಾಗದು. ನಾಗಮಲೆಗೆ ಬರುತ್ತಿದ್ದ ಭಕ್ತರನ್ನು ನಂಬಿಕೊಂಡು ಇಂಡಿಗನತ್ತದಲ್ಲಿ ಜೀಪ್ ಚಾಲಕರು, ಅಂಗಡಿ ವ್ಯಾಪಾರಿಗಳು ಜೀವನ ನಡೆಸುತ್ತಿದ್ದರು. ಆದರೆ, ನಾಗಮಲೆ ಪ್ರವೇಶ ನಿರ್ಬಂಧ ಮಾಡಿರುವುದರಿಂದ ಜೀಪ್ ಓಡಿಸುವವರು ಊರು ತೊರೆದು ಕ್ವಾರಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅಂಗಡಿ ಇಟ್ಟಿರುವವರಿಗೆ ವ್ಯಾಪಾರವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts