More

    ಸಂಗೀತದಿಂದ ಮನಸ್ಸಿಗೆ ನೆಮ್ಮದಿ -ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಭಿಮತ

    ಹನುಮಸಾಗರ: ಒತ್ತಡದಲ್ಲಿ ಜೀವನ ನಡೆಸುವ ಜನರಿಗೆ ಶಾಂತಿ ನೀಡುವ ಶಕ್ತಿ ಸಂಗೀತಕ್ಕಿದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಗೀತ ಪಾಠ ಕಲಿಸಲು ಮುಂದಾಗಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

    ಪಟ್ಟಣದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ದೇವಾಂಗ ಸಮುದಾಯ ಸೋಮವಾರ ಹಮ್ಮಿಕೊಂಡಿದ್ದ ಹಾಸ್ಯ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಸಕಲ ಜೀವರಾಶಿಗಳಿಗೆ ಭಗವಂತ ಶಾಂತಿವೊಂದು ಬಿಟ್ಟು ಎಲ್ಲವನ್ನೂ ನೀಡಿದ್ದಾನೆ. ಯಾರು ಸಂಗೀತ ಆಸಕ್ತರಾಗಿರುತ್ತಾರೋ ಅವರ ಮನಸು ಸದಾ ಶಾಂತತೆಯಿಂದ ಕೂಡಿರುತ್ತದೆ. ಇಂದಿನ ಕಂಪ್ಯೂಟರ್ ದಿನಮಾನದಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ಸಂಗೀತದ ಜತೆ ಹಾಸ್ಯವೂ ಅವಶ್ಯವಾಗಿದೆ. ಪ್ರತಿಯೊಬ್ಬರೂ ಏನೇ ಕಷ್ಟಗಳಿದ್ದರೂ ನಗು ನಗುತಾ ಇರಬೇಕು ಎಂದರು.

    ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರ ಮಾತನಾಡಿದರು. ಸಂಗೀತ ಶಿಕ್ಷಕ ಜುಮ್ಮನಗೌಡ ಪಾಟೀಲ್ ಸುಗಮ ಸಂಗೀತ, ವಿನೋದ ಪಾಟೀಲ್ ಹಾರ್ಮೊನಿಯಂ, ಸಾಗರ ಬಡಿಗೇರ ಕ್ಯಾಶಿಯೊ, ತುಂಗಾ ಶಿರಗುಂಪಿ ವೀಣಾ ಸಾಥ್ ನೀಡಿದರು. ಆಕಾಶವಾಣಿ ಹಾಸ್ಯ ಕಲಾವಿದ ಜೀವನಸಾಬ್ ಬಿನ್ನಾಳ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ನಿಸರ್ಗ ಸಂಗೀತ ಶಾಲೆ ಅಧ್ಯಕ್ಷ ಮಲ್ಲಯ್ಯ ಕೋಮಾರಿ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಬಣಜಿಗ ಸಮುದಾಯದ ತಾಲೂಕಾಧ್ಯಕ್ಷ ವಿಶ್ವನಾಥ ಕನ್ನೂರ, ದೇವಾಂಗ ಸಮುದಾಯದ ಸ್ಥಳೀಯ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಉಪಾಧ್ಯಕ್ಷ ಸುರೇಶ ಸಿನ್ನೂರ, ಮುಖಂಡರಾದ ಸಂಗಯ್ಯ ವಸ್ತ್ರದ, ವಿಠಲಶ್ರೆಷ್ಠ ನಾಗೂರ, ಅಂಬಾಸಾ ರಂಗ್ರೇಜ, ಶಂಕ್ರಪ್ಪ ಸಪ್ಪಂಡಿ, ಗ್ರಾಪಂ ಸದಸ್ಯರಾದ ರಾಮಣ್ಣ ವಡ್ಡರ, ರುದ್ರಗೌಡ ಗೌಡಪ್ಪನವರ, ಶ್ರೀಶೈಲಪ್ಪ ಮೋಟಗಿ, ವಿಶ್ವನಾಥ ಯಾಳಗಿ, ಫಾರೂಕ್ ಡಲಾಯತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts