More

    ಕಪಿಲ ತೀರ್ಥ ಜಲಪಾತಕ್ಕೆ ಸೌಲಭ್ಯ ಕಲ್ಪಿಸಿ, ಸಂಸದ ಸಂಗಣ್ಣ ಕರಡಿಗೆ ಕಬ್ಬರಗಿ ಹಾಗೂ ಬಿಳಗಿ ಗ್ರಾಮಸ್ಥರ ಮನವಿ

    ಹನುಮಸಾಗರ: ಕಪಿಲ ತೀರ್ಥ ಜಲಪಾತಕ್ಕೆ ರಸ್ತೆ ಸೇರಿ ವಿವಿಧ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ಸಂಸದ ಸಂಗಣ್ಣ ಕರಡಿ ಭರವಸೆ ನೀಡಿದರು.

    ಸಮೀಪದ ಕಬ್ಬರಗಿ ಗ್ರಾಮದ ಕಪಿಲ ತೀರ್ಥ ಜಲಪಾತಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಇಲ್ಲಿಗೆ ಸ್ಥಳೀಯ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಸಾವಿರಾರು ಜನರು ಬರುತ್ತಾರೆ. ಆದರೆ, ಈ ಜಲಪಾತಕ್ಕೆ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ. ಸದ್ಯ ಇರುವ ರಸ್ತೆ ಅಭಿವೃದ್ಧಿ ಪಡಿಸಿಲ್ಲ. ಇದರಿಂದಾಗಿ ಜಲಪಾತಕ್ಕೆ ಹೋಗಲು ಪ್ರವಾಸಿಗರು ತೊಂದರೆ ಅನುಭವಿಸಬೇಕಾಗಿದೆ.

    ಮಳೆಗಾಲದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜಲಪಾತಕ್ಕೆ ವಿವಿಧ ಮೂಲ ಸೌಲಭ್ಯ ಒದಗಿಸಬೇಕೆಂದು ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು ಸೇರಿ ಕಬ್ಬರಗಿ ಹಾಗೂ ಬಿಳಗಿ ಗ್ರಾಮಸ್ಥರು ಸಂಸದ ಸಂಗಣ್ಣ ಕರಡಿ ಬಳಿ ಮನವಿ ಮಾಡಿದಾಗ, ಜಲಪಾತದ ಅಭಿವೃದ್ಧಿ ಕಾರ್ಯಗಳನ್ನು ಸಚಿವರು ಮತ್ತು ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಭಿವೃದ್ಧಿ ಕಾರ್ಯಕೈಗೊಳುವ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

    ಕಬ್ಬರಗಿ ಗ್ರಾಪಂ ಅಧ್ಯಕ್ಷ ಮಹಾಂತೇಶ ವಜ್ಜಲ, ಮುಖಂಡರಾದ ಮೇಘರಾಜ ವಜ್ಜಲ, ಯಮನೂರಪ್ಪ ಗುರಿಕಾರ, ವಿಶ್ವನಾಥ ನಾಗೂರ, ರಮೇಶ ಬಡಿಗೇರ, ರುದ್ರಗೌಡ ಗೌಡಪ್ಪನವರ, ಸಿಕಂದರ ಹೊಸಮನಿ, ಶರಣಗೌಡ ಗೌಡಪ್ಪನವರ, ಶಿವಪುತ್ರಪ್ಪ ಕೋಳೂರ, ವಿಜಯ ಕುಷ್ಟಗಿ, ಬಸವರಾಜ ದ್ಯಾವಣ್ಣನವರ, ಬಸವರಾಜ ಹಕ್ಕಿ, ಹನುಮಂತಪ್ಪ ಹಕ್ಕಿ, ವೀರೇಶ ಕಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts