More

    ದೇಗುಲಗಳು ವಧಾಲಯಗಳಾಗದಿರಲಿ- ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ

    ಹನುಮಸಾಗರ: ಪ್ರಾಣಿಗಳನ್ನು ಬಲಿಕೊಟ್ಟರೆ ದೇವರು ಒಲಿಯುವುದಿಲ್ಲ. ಶ್ರದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.

    ಸಮೀಪದ ಕುಂಬಳಾವತಿ ಗ್ರಾಮದೇವತೆ ದ್ಯಾಮಾಂಬಿಕ ದೇವಿ ಜಾತ್ರೆಗೆ ಹರಕೆ ನೀಡಲು ಬಿಟ್ಟಿದ್ದ ಕೋಣವನ್ನು ಬುಧವಾರ ಗ್ರಾಮಸ್ಥರಿಂದ ವಶಕ್ಕೆ ಪಡೆದು ಮಾತನಾಡಿದರು. ಕೋಣವನ್ನು ವಧೆ ಮಾಡದೆ ನನಗೆ ಹಸ್ತಾಂತರಿಸಿರುವುದು ಸಂತಸದ ವಿಷಯ. ದೇವಾಲಯಗಳ ಆವರಣದಲ್ಲಿ ಪ್ರಾಣಿಗಳನ್ನು ಬಲಿಕೊಟ್ಟು ದೇವಾನು ದೇವತೆಗಳು ನೆಲೆಸಿರುವ ಪವಿತ್ರ ಸ್ಥಳಗಳನ್ನು ಕಸಾಯಿ ಖಾನೆಗಳಾಗಿ ಮಾಡಬೇಡಿ. ದೇವಾಲಯಗಳು ವಧಾಲಯಗಳಾಗದೇ, ದಿವ್ಯಾಲಯಗಳಾಗಬೇಕು. ದೇವರ ಹೆಸರಿನಲ್ಲಿ ದೇವಾಲಯದ ಆವರಣ, ಸುತ್ತಮುತ್ತ ಕೋಣ, ಕುರಿ, ಆಡು, ಕೋಳಿ ಇತರ ಪ್ರಾಣಿಗಳನ್ನು ಬಲಿ ನೀಡುವುದು ಕಾನೂನು ರಿತ್ಯ ಅಪರಾಧ. 2021ರ ಜಾನುವಾರು ಹತ್ಯೆ ತಡೆ ನಿಷೇಧ ಕಾಯ್ದೆ ಪ್ರಕಾರ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಪ್ರಾಣಿಯನ್ನು ವಧೆ ಮಾಡುವುದು ಅಪರಾಧವಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾದವರಿಗೆ ಐದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಭಕ್ತರು ಪ್ರಾಣಿ ಬಲಿ ನೀಡದೆ ಅರಿಸಿಣ, ಕುಂಕುಮ, ಧೂಪ, ಸಿಹಿ ಖಾದ್ಯವನ್ನು ದೇವರಿಗೆ ಸಮರ್ಪಿಸಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

    ವಿಶ್ವ ಪ್ರಾಣಿ ದಯಾ ಸಂಘದ ಮಹಿಳಾ ಸಂಚಾಲಕಿ ಸುನಂದಾ, ಶರಣಪ್ಪ ಕಮ್ಮಾರ, ಪಿಎಸ್‌ಐ ಅಶೋಕ ಬೇವೂರು, ಗ್ರಾಮಸ್ಥರಾದ ಸುಬ್ಬರಾವ್ ಕುಲಕರ್ಣಿ, ಹುಲ್ಲಪ್ಪ ವಡಿಗೇರಿ, ಪ್ರಕಾಶ ಸಿಂಗ್ ರಜಪೂತ, ಶರಣಪ್ಪ ಹನುಮಸಾಗರ, ಮುತ್ತಪ್ಪ ಕುಂಟೋಜಿ, ಕಳಕಪ್ಪ ಜಗ್ಗಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts