More

    ನಿಷ್ಠೆಯಿಂದ ಕೆಲಸ ಮಾಡಿದರೆ ಹೆದರಬೇಕಿಲ್ಲ, ಎಸ್ಪಿ ಸಲಹೆ

    ಹನುಮಸಾಗರ: ನಿಷ್ಠೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಟೀಕೆ, ದೂರುಗಳಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪೊಲೀಸ್ ಠಾಣೆಯನ್ನು ಜನಸ್ನೇಹಿಯಾಗಿ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.

    ಪಟ್ಟಣದಲ್ಲಿ ನೂತನ ಪೊಲೀಸ್ ಠಾಣೆಯ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಮೇಲಧಿಕಾರಿಗಳು ನೋಡುತ್ತಾರೆಂದು ಕೆಲಸ ಮಾಡಬೇಡಿ. ನಿಷ್ಠೆ, ಪ್ರಾಮಾಣಿಕ, ಆತ್ಮವಿಶ್ವಾಸ, ಸನ್ನಡತೆ ಬೆಳೆಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯ. ಆದ್ದರಿಂದ ಕರ್ತವ್ಯದ ಜತೆಗೆ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.

    ಇದನ್ನೂ ಓದಿ: ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!

    ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಠಾಣೆ ಆವರಣವನ್ನು ಹಸಿರು ಮಯವಾಗುವಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡುವ ಮೂಲಕ ಜಿಲ್ಲೆಯಲ್ಲಿ ಮಾದರಿ ಠಾಣೆಯನ್ನಾಗಿ ಮಾಡಬೇಕು. ಚುನಾವಣೆ ಪ್ರಚಾರದ ವೇಳೆ ಗಲಾಟೆ ಆಗದಂತೆ ನೋಡಿಕೊಳ್ಳಬೇಕು. ಅನಗತ್ಯ ಮತಗಟ್ಟೆ ಒಳಗೆ ಹೋಗದೆ, ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂದು ತಿಳಿಸಿದರು.

    ಗಂಗಾವತಿ ವಿಭಾಗದ ಡಿವೈಎಸ್ಪಿ ಶೇಖರಪ್ಪ ಎಚ್., ಸಿಪಿಐ ನಿಂಗಪ್ಪ ರುದ್ರಗೋಳ, ಪಿಎಸ್‌ಐಗಳಾದ ಸುನೀಲ್ ಎಚ್., ಮೌನೇಶ ರಾಠೋಡ, ತಿಮ್ಮಪ್ಪ ನಾಯಕ್, ಶ್ರೀಶೈಲ ಕುಲಕರ್ಣಿ, ಎಎಸ್‌ಐಗಳಾದ ರಾಮನಗೌಡ ಪಾಟೀಲ್, ರಾಮಚಂದ್ರಪ್ಪ ಮುರಾರಿ, ಎಸ್.ಎಚ್.ಮೇಟಿ, ವಸಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts