More

    ಕರೊನಾ ತೊಲಗಿಸಲು ಧಾರ್ಮಿಕ ಅಭಿಯಾನ

    ಕೋವಿಡ್ -19 ಮರಳಿ ಸೃಷ್ಟಿಕರ್ತನ ಕಡೆಗೆ ಚಾಲನೆ

    ಹನುಮಸಾಗರ: ಕೋವಿಡ್-19 ಮರಳಿ ಸೃಷ್ಟಿಕರ್ತನ ಕಡೆಗೆ ಎಂಬ ಧ್ಯೇಯದೊಂದಿಗೆ ಪಟ್ಟಣದ ಜಮಾಅತೆ ಇಸ್ಲಾಮಿ ಹಿಂದ್ ಘಟಕ ಧಾರ್ಮಿಕ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿತು.

    ಜಮಾಅತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಘಟಕದ ಅಧ್ಯಕ್ಷ ಗೇಸುದರಾಜ್ ಮೂಲಿಮನಿ ಮಾತನಾಡಿ, ಜಗತ್ತು ಈಗಾಗಲೇ ಬಹಳಷ್ಟು ಸಾಂಕ್ರಾಮಿಕ ರೋಗಗಳನ್ನು ಕಂಡಿದೆ. ಆದರೆ, ಕೋವಿಡ್-19 ಜಗತ್ತಿನಾದ್ಯಂತ ಉಂಟು ಮಾಡಿರುವ ಪರಿಣಾಮ ಹಾಗೂ ನಷ್ಟದ ಅಂದಾಜು ಲೆಕ್ಕಕ್ಕೆ ಸಿಗದಷ್ಟು ದೊಡ್ಡದಾಗಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿ ಹೊರತಾಗಿಯೂ ಕರೊನಾ ನಿಯಂತ್ರಿಸುವಲ್ಲಿ ಮನುಷ್ಯನ ಅಸಹಾಯಕತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.

    ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಜಾಕ್‌ಸಾಬ್ ಚಳಗೇರಿ, ಮುಖಂಡರಾದ ಬಾಬುಮಿಯ ಚೌದ್ರಿ, ಶಾಮಿದ್‌ಸಾಬ್ ಚೌದ್ರಿ, ಮೆಹಬೂಬ್ ಮೇಣೆದಾಳ, ದಸ್ತಗೀರ್‌ಸಾಬ್ ಮೂಲಿಮನಿ, ಖಾಜಸಾಬ್ ಡಲಾಯತ್, ಜಹಾಂಗೀರ್, ಡಾ.ಖಾಜಾಹುಸೇನ್ ಹುಲಿಹೈದರ್, ಲಾಲ್‌ಸಾಬ್ ಫುಟ್ವೇರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts