More

    ರಾಮನಗರದ ವಿವಿಧ ದೇಗುಲಗಳಲ್ಲಿ ಹನುಮ ಜಯಂತಿ

    ರಾಮನಗರ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ಹನುಮ ಜಯಂತಿ ಪ್ರಯುಕ್ತ ಆಂಜನೇಯ ದೇಗುಲಗಳಲ್ಲಿ ಭಾನುವಾರ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳು ನೆರವೇರಿದವು.

    ಕೆಂಪೇಗೌಡ ವೃತ್ತದ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ, ಅಗ್ರಹಾರದ ಶ್ರೀಅಭಯ ಆಂಜನೇಯಸ್ವಾಮಿ ದೇವಾಲಯ, ಕಂದಾಯ ಭವನದ ಮುಂಭಾಗದ ವೃತ್ತದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ, ವಿಜಯನಗರ, ಬೆಂಗಳೂರು-ಮೈಸೂರು ರಸ್ತೆ, ಗಾಂಧಿ ನಗರ, ವಿವೇಕಾನಂದ ನಗರ, ಚನ್ನಮಾನ ಹಳ್ಳಿ, ಮಾರುತಿ ನಗರ, ಛತ್ರದ ಬೀದಿಯ ಹನುಮ ದೇವಾಲಯ, ಭೈರಮಂಗಲದ ಆಂಜನೇಯ ಸ್ವಾಮಿ ದೇವಾಲಯ, ಪೇಟೆ ಕುರುಬರಹಳ್ಳಿಯ ಉದ್ಭವ ಆಂಜನೇಯ ಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಕಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.

    ಮುಂಜಾನೆ ಯಿಂದಲೇ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಗರದ ವಿವಿಧ ದೇವಸ್ಥಾನಗಳಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಗಣಹೋಮ, ಪವಮಾನ ಹೋಮ, ವಾಸ್ತು ಹೋಮ, ಶ್ರೀರಾಮತಾರಕ ಮಂತ್ರ, ಜಪಹೋಮ ಸೇರಿದಂತೆ ವಿವಿಧ ಧಾರ್ವಿುಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ನಗರದ ವಿವಿಧ ದೇವಸ್ಥಾನಗಳಲ್ಲಿ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.

    ಆಂಜನೇಯ ಸ್ಮರಣೆ

    ಹನುಮ ಜಯಂತಿ ಪ್ರಯುಕ್ತ ಭಾನುವಾರ ನಗರದ ವಿವಿಧ ಹನುಮ ದೇವಾಲಯಗಳಲ್ಲಿ ಧಾರ್ವಿುಕ ಕೈಂಕರ್ಯಗಳು ನೆರವೇರಿದವು. ಭಕ್ತರು ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.

    ನಗರದ ಬಸ್ ನಿಲ್ದಾಣದ ಬಳಿಯ ವೀರಾಂಜನೇಯ, ಇ.ಒ. ಕ್ವಾರ್ಟಸ್​ನ ಅಭಯ ಆಂಜನೇಯಸ್ವಾಮಿ, ಕೋಟೆಬಾಗಿಲು ವೀರಾಂಜನೇಯ, ರಾಮನಗರ ರಸ್ತೆ ಮುತ್ತುರಾಯಸ್ವಾಮಿ, ಹೊಳೆಬೀದಿ ಆಂಜನೇಯಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ನೆರವೇರಿದವು. ಇ.ಒ. ಕ್ವಾರ್ಟಸ್​ನ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಸಂಚಾಲಕ ವಿಶ್ವೇಶ್ವರಯ್ಯ, ಬಸ್​ನಿಲ್ದಾಣ ದೇವಾಲಯದ ಟ್ರಸ್ಟ್​ನ ಶೇಖರ್​ಸ್ವಾಮಿ, ರವಿ, ವೆಂಕಟೇಶ್, ಹಲವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts