More

    ಎಲ್ಲೆಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಪರ-ವಿರೋಧ, ಈ ಶಾಲೆಯಲ್ಲಿ ಊರ ಹೆಸರಿನದ್ದೇ‌ ವಿವಾದ..

    ಚಾಮರಾಜನಗರ: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ಕುರಿತು ಪರ-ವಿರೋಧ‌ ಕೇಳಿಬರುತ್ತಿದ್ದರೆ, ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಗ್ರಾಮದ ಹೆಸರಿನ ವಿಚಾರದಲ್ಲಿ ವಿವಾದ ಭುಗಿಲೆದ್ದು ಪಾಲಕರು ಮಕ್ಕಳನ್ನು ಗುರುವಾರ ಶಾಲೆಗೆ ಕಳುಹಿಸಿಲ್ಲ.

    ತಾಲೂಕಿನ ಹೊಸದೊಡ್ಡಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ “ಮೈಸೂರಪ್ಪನ ದೊಡ್ಡಿ” ಬದಲು “ಹೊಸದೊಡ್ಡಿ” ಎಂದು ನಮೂದಿಸುವಂತೆ ಒತ್ತಾಯಿಸಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿಯನ್ನು ಬಹಿಷ್ಕರಿಸಿದಸ್ದಾರೆ.

    ಮೈಸೂರಪ್ಪನ ದೊಡ್ಡಿಯಲ್ಲಿ ಈ ಹಿಂದೆ ಶಾಲೆಯನ್ನು ತೆರೆಯಲಾಗಿತ್ತು. ಆದರೆ ದಾಖಲಾತಿ ಕುಸಿತ ಕಂಡ ಹಿನ್ನಲೆ ಉಳಿಕೆ ವಿದ್ಯಾರ್ಥಿಗಳನ್ನು ಸಮೀಪದ ಹೊಸದೊಡ್ಡಿ ಶಾಲೆಗೆ ವರ್ಗಾಯಿಸಿ ಶಾಲೆಯ ಹೆಸರನ್ನು ಮೈಸೂರಪ್ಪನ ದೊಡ್ಡಿ ಶಾಲೆ ಎಂದು ನಮೂದಿಸಲಾಗಿತ್ತು.

    ಗ್ರಾಮಸ್ಥರು ಶಾಲೆಯ ಹೆಸರನ್ನು ಹೊಸದೊಡ್ಡಿ ಎಂದು ನಾಮಕರಣ ಮಾಡಬೇಕೆಂದು ಆಗಿಂದಾಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಪಾಲಕರು ಗುರುವಾರ ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿಗಳಿಗೆ ಬಹಿಷ್ಕಾರ ಹಾಕಿದರು. ಶಿಕ್ಷಕರು ಮತ್ತು ಬಿಇಒ ಮನವೊಲಿಸಿದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ.

    VIDEO| ಲಿವಿಂಗ್​ಸ್ಟೋನ್​ ಸಿಡಿಸಿದ ಬಿಗ್​ ಸಿಕ್ಸರ್​ ಚೆಂಡನ್ನು ತೆಗೆದುಕೊಡಲು ಕಾರ್ಮಿಕರೇ ಬರಬೇಕಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts