More

    ಡಿಸ್ಪೆನ್ಸರ್​ ಅಥವಾ ಕೊಳಾಯಿ ಮುಟ್ಟದೆ ಕೈಸ್ವಚ್ಛಗೊಳಿಸುವ ಯಂತ್ರ, ಇದು ಎಲ್ಲಿದೆ ಗೊತ್ತಾ?

    ಹುಬ್ಬಳ್ಳಿ: ಇದೀಗ ಎಲ್ಲೆಡೆ ಕರೊನಾ ವೈರಸ್​ ಸೋಂಕಿನ ಭಯ ಹಬ್ಬಿದೆ. ಕೈಯನ್ನು ಸ್ವಚ್ಛಗೊಳಿಸಿಕೊಳ್ಳದೆ ಯಾವುದೇ ವಸ್ತುವನ್ನು ಮುಟ್ಟಲು ಜನ ಹೆದರುತ್ತಿದ್ದಾರೆ. ಕೈಯಲ್ಲಿ ಡಿಸ್ಪೆನ್ಸರ್​ ಅನ್ನು ಮುಟ್ಟಿ, ಕೊಳಾಯಿ ತಿರುಗಿಸಿ ನೀರು ಬಿಟ್ಟುಕೊಂಡು ಕೈತೊಳೆಯಲೂ ಹಿಂದೇಟು ಹಾಕುವ ಮಟ್ಟಿಗೆ ಈ ಭಯ ಹಬ್ಬಿಕೊಂಡಿದೆ.

    ಈ ಭಯ ನಿವಾರಣೆಗಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಮುಟ್ಟದೆಯೇ ಕೈಸ್ವಚ್ಛಗೊಳಿಸುವ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇದನ್ನು ಬಳಸುವುದರಿಂದ ನೀರಿನ ಉಳಿತಾಯವೂ ಆಗುತ್ತದೆ ಎಂದು ಹೇಳಿದ್ದಾರೆ.
    ಸದ್ಯ ಈ ಯಂತ್ರ ಹುಬ್ಬಳ್ಳಿ ವಿಭಾಗದ ಕ್ಯಾರೇಜ್​ ಮತ್ತು ವ್ಯಾಗನ್​ ಡಿಪೋದಲ್ಲಿ ಸ್ಥಾಪನೆಗೊಂಡಿದೆ. ವಿಭಾಗೀಯ ರೈಲ್ವೆ ಪ್ರಬಂಧಕ ಅರವಿಂದ್​ ಮಲ್ಕೇಡ್​ ನಿರ್ದೇಶನದಂತೆ ವಿಭಾಗೀಯ ಅಧಿಕಾರಿಗಳು ಈ ಯಂತ್ರವನ್ನು ಸಿದ್ಧಪಡಿಸಿದ್ದಾರೆ.

    ಯಂತ್ರದ ಕಾರ್ಯನಿರ್ವಹಣೆಯ ಬಗೆ…: ದೊಡ್ಡ ಸಿಂಟೆಕ್ಸ್​ ಟ್ಯಾಂಕ್​ನ ಎಡ ಮತ್ತು ಬಲಬದಿಯಲ್ಲಿ ಪ್ರತ್ಯೇಕವಾಗಿ ಎರಡು ಲಿವರ್​ ನೀಡಲಾಗಿದೆ. ಮಧ್ಯದಲ್ಲಿ ಸಿಂಕ್​ ಅನ್ನು ಜೋಡಿಸಲಾಗಿದೆ.

    ಬಲಬದಿಯ ಲಿವರ್​ ಒತ್ತಿದರೆ ಸ್ಯಾನಿಟೈಸರ್​ ಹೊರಬರುತ್ತದೆ. ಅದರಿಂದ ಕೈಯನ್ನು ಸ್ವಚ್ಛಗೊಳಿಸಿಕೊಂಡು, ಎಡಬದಿಯ ಲಿವರ್​ ಒತ್ತಿ ನೀರಿನಲ್ಲಿ ಕೈತೊಳೆದುಕೊಳ್ಳಬಹುದು. ಈ ರೀತಿ ಕೊಳಾಯಿಯನ್ನು ಮುಟ್ಟದೆ ಕೈಸ್ವಚ್ಛಗೊಳಿಸಿಕೊಳ್ಳಬಹುದಾಗಿದೆ.
    ಈ ಯಂತ್ರ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಇಂಥ ಇನ್ನೂ 100 ಯಂತ್ರಗಳನ್ನು ಸ್ಥಾಪಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

    ಲಾಕ್​ಡೌನ್​ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts