More

    ಎರಡೂ ಕೈಲಿ ಒಂದೊಂದೇ ಬೆರಳಿದ್ರೂ ಬರೆಯೋದು ಕಲಿತು ಡಿಗ್ರಿ ಮಾಡಿದ ಅಂಗವಿಕಲೆಗೆ ಒಲಿದು ಬಂದ ವರ!

    ಹೊಸನಗರ: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಎಂಬ ಮಾತೊಂದಿದೆ. ಒಂದು ಹೆಣ್ಣಿಗೆ ಒಂದು ಗಂಡು ಎಂಬುದು ಮೊದಲೇ ನಿಗದಿಯಾಗಿರುತ್ತದೆ. ಹಾಗೆಂದು ನಮ್ಮ ಹಿರಿಯರು ನಂಬುತ್ತಾರೆ. ಹುಟ್ಟುವಾಗಲೆ ಎರಡೂ ಕೈಗಳ ಬೆಳವಣಿಗೆ ಕಳೆದುಕೊಂಡು ಅಂಗವಿಕಲೆಯಾಗಿದ್ದ ಹೊಸನಗರ ತಾಲೂಕು ಇಟ್ಟಕ್ಕಿಯ ಆಶಾಲತಾ ಬದುಕಿನಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಅರ್ಚಕ ಎ.ಪಿ. ಪ್ರಕಾಶ್ ಭರವಸೆಯ ಬೆಳಕಾಗಿ ಬಂದಿದ್ದಾರೆ. ಭಾನುವಾರ ಸರಳ ಸಮಾರಂಭದಲ್ಲಿ ಆಶಾಲತಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

    ಹೊಸನಗರ ತಾಲೂಕು ಇಟ್ಟಕ್ಕಿಯ ಶಾರದಮ್ಮ ದಿ. ಗೋಪಾಲ ಆಚಾರ್ ಅವರಿಗೆ ನಾಲ್ಕು ಹೆಣ್ಣು ಮಕ್ಕಳು. ಅಲ್ಪಸ್ವಲ್ಪ ಕೃಷಿ ಭೂಮಿಯೇ ಬದುಕಿಗೆ ಆಶ್ರಯ. ಮೊದಲ ಮೂರು ಹೆಣ್ಣು ಮಕ್ಕಳು ಆರೋಗ್ಯವಾಗಿದ್ದು ಕೊನೆಯ ಮಗಳು ಆಶಾಲತಾ ಹುಟ್ಟಿನಿಂದಲೆ ಅಂಗವಿಕಲೆ. ಎರಡು ಕೈಗಳು ಸರಿಯಾಗಿ ಬೆಳವಣಿಗೆ ಆಗಿಲ್ಲ. ಎರಡೂ ಕೈಗಳಲ್ಲಿ ಒಂದೊಂದೇ ಬೆರಳು ಇವೆ. ಅಂಗವಿಕಲೆ ಎಂದು ಧೃತಿಗೆಡದೆ ತನ್ನೆರಡು ಕೈಗಳ ಒಂದೊಂದೆ ಬೆರಳನ್ನು ಜೋಡಿಸಿ ಬರೆಯಲು ಅಭ್ಯಾಸ ಮಾಡಿಕೊಂಡು ಪದವಿ ಗಳಿಸಿದ್ದಾರೆ. ಪದವಿ ಪಡೆದ ನಂತರ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ಕೆಲಸಕ್ಕೆ ಪ್ರಯತ್ನ ಮಾಡಿದ್ದು, ಸದ್ಯ ಮೂಡುಗೊಪ್ಪ ನಗರ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

    ಸಿ.ಟಿ. ರವಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್; ದೂರು ದಾಖಲು ಪ್ರಕ್ರಿಯೆಯಲ್ಲೇ ಕಾನೂನು ಉಲ್ಲಂಘನೆ

    ಕದಿಯುವಾಗಲೇ ಸಿಕ್ಕಿಬಿದ್ದ ಎಳನೀರು ಕಳ್ಳ; ಮಾರಾಟಗಾರರೇ ಕಾದು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts