More

    ವಿಶೇಷ ಚೇತನ ಮಕ್ಕಳಿಗೆ ಕಿಟ್​ ವಿತರಣೆ

    ಗದಗ:
    ವಿಶೇಷ ಚೇತನ ಮಕ್ಕಳ ಬಗೆಗೆ ಕೀಳರಿಮೆ ಬೇಡ. ತಂದೆ ತಾಯಿಗಳು ಇಂತಹ ಮಕ್ಕಳನ್ನು ಆತ್ಮಸ್ಥೆರ್ಯದಿಂದ ಪೋಷಿಸಬೇಕು. ಸಮುದಾಯ ಸಹಿತ ಜವಾಬ್ದಾರಿಯಿಂದ ಈ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್​.ಬೇಲೇರಿ ಹೇಳಿದರು.
    ಶನಿವಾರ ಗದಗ ಹೆಲ್ಪಿಂಗ್​ ಹ್ಯಾಂಡ್ಸ್​ ೌಂಡೇಶನ್​ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ನೀಡಿದ ುಡ್​ ಕಿಟ್​ಗಳನ್ನು ವಿತರಿಸಿ ಮಾತನಾಡಿದರು.
    ಸಾಮಾನ್ಯ ಮಕ್ಕಳನ್ನು ಬೆಳೆಸುವದು ಸುಲಭ. ಆದರೆ, ವಿಶೇಷ ಚೇತನ ಮಕ್ಕಳ ಪಾಲನೆ, ಪೋಷಣೆ ಕಷ್ಟ. ಪಾಲಕರು ಧೈರ್ಯದಿಂದ ಈ ಮಕ್ಕಳ ಬೆಳವಣಿಗೆಯಲ್ಲಿ ವಿಶೇಷ ಕಾಳಜಿ ವಹಿಸಬೇಕೆಂದರು.
    ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ಹುಟ್ಟಿನಿಂದಲೇ ವಿಕಲತೆ ಹೊಂದಿದ ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲುಹಿದ ತಂದೆ ತಾಯಿಗಳೇ ನಿಜವಾದ ದೇವರು ಎಂದರು.
    ಶಶಿಧರ ಚಳಗೇರಿ, ಮಲ್ಲೇಶಪ್ಪ ಹೊಂಬಳ, ಎಸ್​.ಎಸ್​.ಹಿರೇಮಠ, ಎಸ್​. ಬಿ. ಬಾಗೂರ, ಜಿ. ಕೆ. ಕಾಳಿ, ಗಿರಿಜವ್ವ ಪಲ್ಲೇದ, ಲಕ್ಷಿ$್ಮ ಹಿರೇಮಠ, ಶಾಂತಾ ತೆಲಗಾವಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts