ಹನಮಸಾಗರ: ಬಡ ಹಾಗೂ ಮಧ್ಯಮ ವರ್ಗದವರು ಎದುರಿಸುವ ಆರ್ಥಿಕ ಸಮಸ್ಯೆಯನ್ನು ಸಾಮೂಹಿಕ ವಿವಾಹಗಳು ದೂರ ಮಾಡಲಿವೆ ಎಂದು ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಾಡಲಗೇರಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶ್ರೀಮಂತರಿಗೆ ಮಕ್ಕಳ ಮದುವೆ ಮಾಡುವುದು ಕಷ್ಟವಲ್ಲ. ಆದರೆ, ಬಡವರು ಮಕ್ಕಳ ಮದುವೆಗೆ ಸಾಲ ಮಾಡಿ, ಅದನ್ನು ತೀರಿಸಲು ಜೀವನ ಪರ್ಯಂತ ದುಡಿಯಬೇಕಾಗುತ್ತದೆ. ಸಾಮೂಹಿಕ ವಿವಾಹಗಳು ಬಡವರ ಕಷ್ಟ ದೂರ ಮಾಡುತ್ತವೆ ಎಂದರು.
ಪ್ರಮುಖರಾದ ಮುತ್ತಯ್ಯ ಹಿರೇಮಠ, ನಾಗಯ್ಯ ಹಿರೇಮಠ, ಶರಣಯ್ಯ ಹಿರೇಮಠ. ಮಾತಾಶ್ರೀ ಶಾರದಾದೇವಿ, ವೀರಭದ್ರಪ್ಪ ಶಿವಸಿಂಪಿ, ಎಸ್. ಸಂಗಮೇಶ, ನಾಗನಗೌಡ ಪೋಲಿಸ್‌ಪಾಟೀಲ್, ರಾಮನಗೌಡ ನೈನಾಪೂರ, ಲಕ್ಷ್ಮೀಂದ್ರ ಸ್ವಾಮಿ, ಶಿವಪ್ಪ ರಡ್ಡೇರ, ಸಂಗಪ್ಪ ವೀ. ಅಂಗಡಿ, ಸಿದ್ದಪ್ಪ ಆರಿ, ಶರಣಪ್ಪ ವಕ್ರ, ಅಯ್ಯಪ್ಪ ನಸಗುನ್ನಿ, ಸಂಗಪ್ಪ ಹಳದೂರ, ರೇಖಾ ಆರಿ, ಲಾಲಸಾಬ ಕಡೆಮನಿ, ಚಂದ್ರಶೇಖರ ಗುಣಾರಿ, ಗುರುಪಾದಪ್ಪ ಹಡಪದ, ಸಂಗಪ್ಪ ಬ ಅಂಗಡಿ, ಅಬ್ದುಲ್ ಮುಲ್ಲಾ, ಶರಣಪ್ಪ ಹೊಸೂರ, ಶರಣಪ್ಪ ಹೂಗಾರ, ದುರಗಪ್ಪ ಗುಳಗುಳಿ, ರಾಯಪ್ಪ ಆರಿ, ಕುಮಾರ ಪೂಜಾರ, ಮಂಜು ಗೋನಾಳ, ಶಿಕ್ಷಕ ಗುರುರಾಜ ಹಡಪದ ಇತರರಿದ್ದರು.