More

    ಹಂಪಿ ದೇಗುಲದ ಪಾವಿತ್ರಕ್ಕೆಧಕ್ಕೆ?

    ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ ಭಕ್ತರ ಪಾಲಿಗೆ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿದೆ. ಆದರೆ ಕೆಲ ಪ್ರವಾಸಿಗರು ಬ್ಯಾಗ್‌ಗಳಲ್ಲಿ ಪಾದರಕ್ಷೆ ಇರಿಸಿಕೊಂಡು ಪ್ರವೇಶ ಮಾಡಿ ದೇವಾಲಯದ ಪಾವಿತ್ರಕ್ಕೆ ಧಕ್ಕೆ ತರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಇದನ್ನೂ ಓದಿ: ಹಂಪಿಯಲ್ಲಿ ಪ್ರವಾಸಿಗನ ಕ್ಯಾಮರಾ ಕಳವು, ಆರೋಪಿ ಅರೆಸ್ಟ್

    ತುಂಗಭದ್ರಾ ನದಿಯ ತೀರದಲ್ಲಿರುವ ಶ್ರೀ ವಿರೂಪಾಕ್ಷೇಶ್ವರ ದೇವಾಲಯವು ಹಂಪಿಯ ಐತಿಹಾಸಿಕ ಸ್ಮಾರಕಗಳ ಕೇಂದ್ರ ಬಿಂದುವಾಗಿದೆ. ಶ್ರೀ ವಿರೂಪಾಕ್ಷೇಶ್ವರ ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿದೆ. ಸ್ಥಳೀಯರಲ್ಲದೆ » ಸ್ಥಳೀಯ ಭಕ್ತರ ಆಕ್ರೋಶ ದೇಶ-ವಿದೇಶಗಳಿಂದ ಬರುವ ಭಕ್ತರು, ಪ್ರವಾಸಿಗರು ವಿಶೇಷ ಪೂಜೆ ನಡೆಸುತ್ತಾರೆ.

    ಹಿಂದು ದೇವಾಲಯಗಳಲ್ಲಿ ಯಾವುದೇ ರೀತಿಯಲ್ಲಿ ಪಾದರಕ್ಷೆಯನ್ನು ದೇವಸ್ಥಾನದ ಆವರಣಕ್ಕೂ ಯಾರೂ ಹಾಕಿಕೊಂಡು ಹೋಗಲ್ಲ. ಆದರೆ, ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ ಪಾದರಕ್ಷೆ ಸ್ಥಳಾವಕಾಶ ಇದ್ದರೂ, ಕೆಲ ವಿದೇಶಿಗರು ಸೇರಿದಂತೆ ಇತರರು ಪಾದರಕ್ಷೆಯನ್ನು ಬ್ಯಾಗ್‌ಗಳಲ್ಲಿ ಹಾಕಿಕೊಂಡು ದೇವಸ್ಥಾನ ಒಳಗೆ ಹೋಗಿ ದೇವರ ದರ್ಶನ ಪಡೆದು ಬರುತ್ತಿದ್ದಾರೆ. ಕೆಲವರು ಪಾದರಕ್ಷೆ ಹಾಕಿಕೊಂಡೇ ದೇವಸ್ಥಾನ ಪ್ರವೇಶಿಸಿ, ಸಿಬ್ಬಂದಿಯೊಂದಿಗೆ ವಾದಕ್ಕೆ ಇಳಿದ ಉದಾಹರಣೆಗಳು ಸಾಕಷ್ಟು ನಡೆದಿವೆ. ಇದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಹಾಗೂ ಭಕ್ತರ ಭಾವನೆಗಳಿಗೆ ಕುಂದುಂಟು ಆಗಲಿದ್ದು, ದೇವಸ್ಥಾನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

    ಲಗೇಜ್ ಕೊಠಡಿ ಆರಂಭಿಸಿ: ವಿರೂಪಾಕ್ಷೇಶ್ವರ ದೇವಾಲಯದ ಬಲಭಾಗದಲ್ಲಿ ಪಾದರಕ್ಷೆ ಬಿಡಲು ವ್ಯವಸ್ಥೆ ಮಾಡಲಾಗಿದೆ. ಅದರಂತೆ ಲಗೇಜ್‌ಗಳನ್ನು ಇಡಲು ವ್ಯವಸ್ಥೆ ಇಲ್ಲದೆ ಕಾರಣ ಪ್ರವಾಸಿಗರು ತಮ್ಮ ಬ್ಯಾಗ್ ಗಳೊಂದಿಗೆ ದೇವಾಲಯ ಪ್ರವೇಶ ಮಾಡುತ್ತಿದ್ದಾರೆ. ಆದ್ದರಿಂದ ದೇವಸ್ಥಾನದ ಹೊರಗಡೆ ಲಗೇಜ್ ಕೊಠಡಿ ಆರಂಭ ಮಾಡಬೇಕು. ಇದರಿಂದ ಎಲ್ಲರೂ ಬ್ಯಾಗ್ ಗಳನ್ನು ಅಲ್ಲಿಟ್ಟು ಬರಿಗೈಯಲ್ಲಿ ದೇವಸ್ಥಾನಕ್ಕೆ ಹೋಗಿ ಬರಲಿದ್ದು, ಇಂಥ ಪ್ರಕರಣಗಳು ನಡೆಯದಂತೆ ತಡೆಯಬಹುದು ಎಂಬುದು ಭಕ್ತರ ಸಲಹೆ.

    ಇದನ್ನೂ ಓದಿ: ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭ

    ವಸ್ತ್ರಸಂಹಿತೆ ಜಾರಿಗೆ ಚಿಂತನೆ


    ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭಕ್ತರು, ದೇಶ- ವಿದೇಶಿಗರು ಸಾವಿರಾರು ಸಂಖ್ಯೆ ಯಲ್ಲಿ ಭೇಟಿ ನೀಡುತ್ತಾರೆ. ಒಬ್ಬೊಬ್ಬರು ಒಂದೊಂದು ಉಡುಗೆ ತೊಟ್ಟು ಬರುತ್ತಾರೆ. ಹೀಗಾಗಿ ಪುರುಷರಿಗೆ ಲುಂಗಿ ಹಾಗೂ ಮಹಿಳೆಯರಿಗೆ ಸೀರೆ ಸೇರಿ ಇತರ ಸಾಂಪ್ರದಾಯಿಕ ಉಡುಗೆ ಕಡ್ಡಾಯ ಮಾಡಲು ಚಿಂತನೆ ನಡೆದಿದೆ. ಸಾಂಪ್ರದಾಯಿಕ ಉಡುಗೆ ಇಲ್ಲದ ಪ್ರವಾಸಿಗರಿಗೆ ದೇವಸ್ಥಾನದಿಂದಲೇ ಲುಂಗಿ ವಿತರಿಸಲು ಜಿಲ್ಲಾಡಳಿತ ಯೋಚಿಸಿದೆ.

    ಹಂಪಿ ಕೇವಲ ಧಾರ್ಮಿಕ ಕ್ಷೇತ್ರವಲ್ಲ. ಐತಿಹಾಸಿಕ ಹಾಗೂ ಪ್ರವಾಸಿ ತಾಣವಾಗಿರುವುದರಿಂದ ದೇಶ- ವಿದೇಶದ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಕ್ತರು ಹಾಗೂ ಪ್ರವಾಸಿಗರಿಗೂ ಸಮಸ್ಯೆ ಆಗದಂತೆ ಲುಂಗಿ ಕೊಟ್ಟು ದೇವರ ದರ್ಶನಕ್ಕೆ ಅನುಮತಿ ನೀಡಲು ಚಿಂತನೆ ನಡೆಸಲಾಗಿದೆ. ದೇವಸ್ಥಾನಕ್ಕೆ ಬ್ಯಾಗ್‌ಗಳಲ್ಲಿ ಪಾದರಕ್ಷೆ ತೆಗೆದುಕೊಂಡು ಹೋಗುವವರನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು.
    | ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

    ಹಂಪಿ ಶ್ರೀ ವಿರೂಪಾಕ್ಷೇಶ್ವರ ಈ ಭಾಗದ ಆರಾಧ್ಯ ದೈವ. ಭಕ್ತರ ಭಾವನೆಗೆ ಧಕ್ಕೆಯಾಗುವಂತೆ ಕೆಲವರು ಪಾದರಕ್ಷೆಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ದೇವಸ್ಥಾನದ ಒಳಗೆ ಹೋಗುತ್ತಾರೆ. ಇದನ್ನು ತಡೆಯಬೇಕು. ಹಲವು ವರ್ಷಗಳ ಬೇಡಿಕೆಯಾದ ಸಾಂಪ್ರದಾಯಿಕ ಉಡುಗೆ ಕಡ್ಡಾಯ ಮಾಡಬೇಕು.
    | ನರಸಿಂಹಮೂರ್ತಿ ಬಟ್ಟೆಪಾಟೆ, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ, ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts