More

    ಹಳ್ಳಿಮೇಷ್ಟ್ರು 261: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಬೇಲಿಯನ್ನು ಕತ್ತರಿಸಿ ಸಮತಟ್ಟಾಗಿಸದಿದ್ದರೆ ಅದು ವಿಪರೀತ ಬೆಳೆದು ಬಿಡುತ್ತದೆ.

    If the hedge is not clipped, it will outgrow.

    ಈ ಜಾರುವಂತಹ ಮೆಟ್ಟಲುಗಳನ್ನು ಇಳಿಯುವಾಗ ಕಟಾಂಜನವನ್ನು ಬಿಗಿಯಾಗಿ ಹಿಡಿದುಕೊ.

    Dear, cling to the railings when you walk down these slippery steps.

    ಅಧಿಕಾರಿ ಟಿಕೆಟ್ ಪರಿಶೀಲಿಸಲು ಬಂದಾಗ ನನ್ನ ಟಿಕೆಟ್ ಕೈಗೆ ಸಿಗಲೇ ಇಲ್ಲ.

    When the TTE came to clip my train ticket, I couldn’t find it.

    ನಾನು ಸಂಚಿಕೆಗಳಲ್ಲಿ ಪ್ರಕಟವಾಗುವ ಅಡುಗೆಯ ಟಿಪ್ಪಣಿಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತೇನೆ.

    I’m always clipping recipes out of magazines.

    ಅವನು ತಿರುಗಿ ಆ ರೌಡಿಗೆ ಒಂದು ಕುಕ್ಕಿದ.

    He turned round and clocked the goon.

    ನಿನ್ನ ಪಾದರಕ್ಷೆಗೆ ಅಂಟಿರುವ ದಪ್ಪಗಿನ ಮಣ್ಣಿನ ಮುದ್ದೆಗಳನ್ನು ತೊಳೆದ ನಂತರ ಒಳಗೆ ಬಾ.

    Get in after washing off the big clods  of earth / clumps of soil on your slipper.

    ಜಾಗ್ರತೆ! ಆ ನಾಯಿಯ ತುಂಬಾ ಹತ್ತಿರ ಹೋಗಬೇಡ.

    Be careful, don’t get too close to that dog.

    ಕೆಸರು ಮತ್ತು ತ್ಯಾಜ್ಯದಿಂದ ಅಡಚಣೆಗೊಂಡಿರುವ ಚರಂಡಿಯನ್ನು ಸುಗಮಗೊಳಿಸಲು ಯಾರಾದರೂ

    ಸಿಕ್ಕಿದರೆ ಒಳ್ಳೆಯದಿತ್ತು.

    It would be better if we get someone to clear the drainage clogged with filth & waste.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts