More

    ಹಳ್ಳಿಮೇಷ್ಟ್ರು 248: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಹಳ್ಳಿಮೇಷ್ಟ್ರು 248: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿದೈನಂದಿನ ಬಳಕೆಯ ವಾಕ್ಯಗಳು

    ನಿಂಗೊತ್ತಾ? ಆ ಅಪಘಾತದಲ್ಲಿ ನಾನು ಸತ್ತೇಹೋಗುತ್ತಿದ್ದೆ, ಹೇಗೋ ಬಚಾವಾದೆ. / ಸಾವು ಸಮೀಪ ಬಂದುಹೋಯಿತು.

    Did you know? I had a brush with death in that accident.

    ಕಣ್ಣಿನ ಮೇಲಿದ್ದ ಕೂದಲನ್ನು ಪಕ್ಕಕ್ಕೆ ಸರಿಸುತ್ತ ಆಕೆ ಕಣ್ಣು ಕಿರಿದಾಗಿಸಿ ಕಿಟಕಿಯಿಂದ ಹೊರಗೆ ನೋಡಿದಳು.

    Brushing her hair out of her eyes, she squinted and looked through the window.

    ತನ್ನ ಸೀರೆಯಲ್ಲಾದ ಸುಕ್ಕುಗಳನ್ನು ಸರಿಪಡಿಸುತ್ತ ಆಕೆ ಎದ್ದುನಿಂತಳು.

    She stood up brushing the wrinkleson her saree.

    ಅವಳು ಮುಖ ತಿರುಗಿಸಿ ಕಣ್ಣೀರ ಹನಿಯನ್ನು ಒರೆಸಿಕೊಂಡಳು.

    She turned her face and brushed away a tear.

    ಮಾವಿನಮರಗಳಲ್ಲಿ ಮೊಗ್ಗುಗಳಾಗಿವೆ, ಇನ್ನೊಂದು ವಾರದಲ್ಲಿ ಖಂಡಿತ ಹೂವು ಬಿಡುತ್ತವೆ.

    Mango trees are in bud but will flower in another week.

    ನಿನ್ನ ಹಲ್ಲುಗಳು ಎಲ್ಲಿ ಹೋದವೆಂದು ಚಿಕ್ಕ ಹುಡುಗಿಯನ್ನು ಕೇಳಿದಾಗ ಅವಳು ನಾಚಿಕೆಯಿಂದ ತನ್ನ ಮುಖವನ್ನು ತನ್ನ ತಾಯಿಯ ಸೀರೆಯೊಳಗೆ ಹುದುಗಿಸಿದಳು.

    When I asked the baby where her teeth had gone, she burrowed her head into her mother’s saree.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts