More

    ಹಳ್ಳಿಮೇಷ್ಟ್ರು 257: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಹಳ್ಳಿಮೇಷ್ಟ್ರು 257: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿದೈನಂದಿನ ಬಳಕೆಯ ವಾಕ್ಯಗಳು

    ಹಣ್ಣಿನ ರಸದ ಗ್ಲಾಸ್​ಗೆ ಮಂಜುಗಡ್ಡೆಯ ತುಣುಕುಗಳು ಬೀಳುವಾಗ ಆಗುವ ಕ್ಲಿಂಕ್ ಸದ್ದು ನನಗೆ ಇಷ್ಟ.

    I like the clink of ice cubes in a glass of whisky.

    ನನಗೆ ಬೇರೆ ಮಗ್ ಕೊಡಿ, ಇದರ ಒಂದು ಚಕ್ಕೆ / ತುಂಡು ಕೆತ್ತಿಹೋಗಿದೆ. ಕ್ಷಮಿಸಿ, ಗ್ಲಾಸ್ ಕೆಳಗೆ ಬಿದ್ದು ಒಂದು ಚಿಕ್ಕ ಚೂರು ಒಡೆದುಹೋಯಿತು.

    Sorry, the glass fell down and a piece chipped out of it. Get me another mug. It has a chip out of it.

    ಹೋಟೆಲಿನಲ್ಲಿದ್ದ ತಟ್ಟೆಗಳು ಒಡೆದಿದ್ದು ಚೆಕ್ಕೆ ಹಾರಿಹೋಗಿದ್ದವು.

    Plates at the hotel were cracked and chipped.

    ನನ್ನ ಸಿಟ್ಟನ್ನು ಅದುಮಿಟ್ಟುಕೊಂಡು ನಾನು ‘ಸರಿ, ಹೋಗೋಣ’ ಎಂದು ಹೇಳಿದೆ.

    Choking back my anger, I said, “Okay, let’s go.”

    ಅವನು ಟಿವಿ ನೋಡುತ್ತ ಚಕ್ಕುಲಿಯನ್ನು ಕರುಂ ಕುರುಂ ಎಂದು (ಜೋರಾಗಿ ಶಬ್ದ ಮಾಡುತ್ತಾ) ತಿನ್ನುತ್ತ ಕುಳಿತ.

    He sat watching TV and chomping a rice Chakkuli.

    ಹುಡುಗಿ ಕೇಕ್ ಕತ್ತರಿಸಲು ಆರಂಭಿಸುತ್ತಲೇ ಎಲ್ಲರೂ ಜೋರಾಗಿ ‘ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹಾಡಿದರು.

    As the girl started cutting the cake, guests burst into a chorus of Happy birthday.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts