More

    ಹಳಿಯಾಳದಲ್ಲಿ ಬಾರಕೋಲು ಚಳವಳಿ

    ಹಳಿಯಾಳ: ದೇಶದ ರೈತರ ಹಿತರಕ್ಷಣೆ ಹಾಗೂ ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ಹೊಸ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ರಾಷ್ಟ್ರವ್ಯಾಪಿ ಆರಂಭಿಸಿರುವ ರೈತರ ಹೋರಾಟ ಬೆಂಬಲಿಸಿ ಕರವೇ ತಾಲೂಕು ಘಟಕ ಹಾಗೂ ಕರವೇ ರೈತ ಸಂಘಟನೆ ವತಿಯಿಂದ ಪಟ್ಟಣದಲ್ಲಿ ಬಾರಕೋಲು ಚಳವಳಿ ನಡೆಸಿ ಸರ್ಕಾರದ ಕ್ರಮ ಖಂಡಿಸಲಾಯಿತು.

    ಪಟ್ಟಣದ ಶ್ರೀ ಕಿತ್ತೂರ ಚನ್ನಮ್ಮ ವೃತದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಬಾರಕೋಲು ಚಳವಳಿಗೆ ಚಾಲನೆ ನೀಡಿದರು. ಚನ್ನಮ್ಮ ವೃತ್ತದಿಂದ ಶಿವಾಜಿ ವೃತದವರೆಗೆ ಬಾರಕೋಲುಗಳನ್ನು ಹೊಡೆಯುತ್ತ ಹೊಸ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಘೊಷಣೆಗಳನ್ನು ಕೂಗುತ್ತ ಪ್ರತಿಭಟನಾ ರ‍್ಯಾಲಿ ನಡೆಸಿದರು.

    ತದನಂತರ ಮಿನಿ ವಿಧಾನ ಸೌಧಕ್ಕೆ ತೆರಳಿ ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗುವ ಜೊತೆಯಲ್ಲಿ ಒಕ್ಕೂಟ ವ್ಯವಸ್ಥೆಯ ತತ್ತ್ವಗಳಿಗೆ ವಿರುದ್ಧವಾಗಿವೆ. ಆದಕಾರಣ ರಾಷ್ಟ್ರಪತಿಯವರು ಪ್ರಧಾನ ಮಂತ್ರಿಯನ್ನು ಕರೆಯಿಸಿ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

    ರೈತ ಘಟಕದ ಪ್ರಮುಖರಾದ ಸುರೇಶ ಕೊಕಿತಕರ, ರಾಮಾ ಜಾವಳೇಕರ, ಪ್ರಮುಖರಾದ ಚಂದ್ರಕಾಂತ ದುರ್ವೆ, ವಿನೋದ ದೊಡ್ಮಣಿ, ವಿಜಯ ಪಡ್ನಿಸ್, ಮಹೇಶ ಆನೆಗುಂದಿ, ಸುಧಾಕರ ಕುಂಬಾರ, ಶ್ರೀಶೈಲ ಮಠದೇವರು, ನಾಗೇಶ ಹೆಗಡೆ, ಶಿವು ಡಮ್ಮಣಗಿಮಠ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts