More

    ಮಣ್ಣು ಸಾಗಾಟ ತಡೆಗಟ್ಟಿ

    ಇಂಡಿ: ತಾಲೂಕಿನಲ್ಲಿ ಕೃಷಿಗೆ ಯೋಗ್ಯವಾದ ಮಣ್ಣಿನ ಅಕ್ರಮ ಸಾಗಾಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಅಕ್ರಮ ಮಣ್ಣು ಸಾಗಾಟಗಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರವೇ ಸ್ವಾಭಿಮಾನ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

    ಪಟ್ಟಣದ ಆಡಳಿತಸೌಧಕ್ಕೆ ತೆರಳಿ ಮನವಿ ಸಲ್ಲಿಸಿದ ಕಾರ್ಯಕರ್ತರು, ನದಿ ಪಾತ್ರದಲ್ಲಿನ ಮತ್ತು ರೈತರ ಜಮೀನಿನಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಮಣ್ಣು ಸಾಗಾಟವನ್ನು ತಡೆಗಟ್ಟಬೇಕು. ಅಲ್ಲದೇ ಕಾನೂನು ಬಾಹಿರವಾಗಿ ಎಲ್ಲೆಲ್ಲಿ ಮಣ್ಣು ಶೇಖರಣೆ ಆಗಿದಿಯೋ ಅದನ್ನು ವಶಕ್ಕೆ ಪಡೆದುಕೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಕರವೇ ಸ್ವಾಭಿಮಾನ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕೆಂಬಾಗೆ, ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ, ತಾಲೂಕು ಅಧ್ಯಕ್ಷ ಶಿವು ಬಡಿಗೇರ, ಗಿರೀಶ ಕಲಕಟ್ಟಿ, ನಿಂಗರಾಜು, ಸಂತೋಷ ಕಾಲೇಬಾಗ, ಪ್ರದೀಪ ಮೂರಮನ, ಪ್ರವೀಣ ಸುತಾರ, ಅನುಪ ವಾಲಿ, ಭಾಗೇಶ ಮಲಘಾಣ, ಮಂಜುನಾಥ ಪಾಟೀಲ, ಕಿರಣ ಇಂಗಳೆ, ಪಿಂಟು ಮಾನೆ, ಮಹೇಶ ಹೊಸಮನಿ, ಸಚೀನ ಹಿರೇಮಠ, ಅಜಯಸಿಂಗ್ ಕನ್ನೊಳ್ಳಿ, ತ್ರಿನೇತ್ರ ಹಿರೇಮಠ, ಗುರುಪ್ರಸಾದ ಪವಾರ, ಮಲ್ಲಿಕಾರ್ಜುನ ಕುಂಬಾರ, ಶಿವು ಕೋಳಿ, ಶಿವು ಬಡಿಗೇರ, ಪ್ರದೀಪ ಪವಾರ, ಮಲ್ಲು ಮೇತ್ರಿ, ಆನಂದ ದೇವರ, ಭಾಗೇಶ ತಳವಾರ, ಹಣಮಂತ ಹೋಟಗಿ, ರಜನಿಕಾಂತ ಕಲ್ಲೂರಕರ, ಸಂತೋಷ ಹೆಳವರ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts