More

    ಹಲ್ಯಾಳದಲ್ಲಿ ಕರೊನಾ ತಪಾಸಣೆ

    ಕೊಕಟನೂರ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಶುಕ್ರವಾರ ಸ್ಥಳೀಯ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಮದ 60 ವರ್ಷ ಮೇಲ್ಪಟ್ಟ ವಯೋವೃದ್ಧರ ಕೋವೀಡ್-19 ತಪಾಸಣೆ ಮಾಡಲಾಯಿತು.

    ವೈದ್ಯಾಧಿಕಾರಿ ಡಾ.ಪ್ರವೀಣ ದಬಾಡೆ ಮಾತನಾಡಿ, ಕರೊನಾ ಸೋಂಕು ಹೆಚ್ಚಾಗಿ ವ್ಯಾಪಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದ ವಯೋವೃದ್ಧರ ಮತ್ತು ಅಧಿಕಾರಿಗಳ ತಪಾಸಣೆಗೆ ಆದೇಶ ನೀಡಿದೆ. ಆ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಕರೊನಾ ತಪಾಸಣೆ ಮಾಡಲಾಗುತ್ತಿದೆ. ಅದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು. ಯುವಕರಲ್ಲಿ ಕರೊನಾ ಸೋಂಕು ಲಕ್ಷಣಗಳು ಕಂಡುಬಂದರೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

    ಪಿಡಿಒ ವಿ.ಎಂ.ಸಂದ್ರಿಮನಿ, ಜ್ಯೋತಿ ಚೌಗಲಾ, ಆನಂದ ಮುಕಣಿ, ಸುರೇಶ ಜಾಧವ, ಎಸ್.ಬಿ.ಮೆಣಸಂಗಿ, ಸಿದ್ದಪ್ಪ ಪಾಟೀಲ, ಇರ್ಫಾನ್ ಮುಜಾವರ, ಮಹಾದೇವ ಬಿಸಲನಾಯಿಕ, ಕುಶಾಲ ಬನಸೋಡೆ, ಅಭಿಷೇಕ ಹುಂಬಿ, ಶಿವಾನಂದ ಇಂಗಳಿ, ಶಶಿಕಾಂತ ದಳವಾಯಿ, ನಿರ್ಮಲಾ ನಿಡೋಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts