More

    ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ಬೀಳತ್ತೆ ದಂಡ..!

    ಬೆಂಗಳೂರು: ರಾಜ್ಯದಲ್ಲಿ ಎಲ್ಲ ಕಡೆಯಲ್ಲೂ ಹಿಂಬದಿ ಸವಾರರಿಗೂ ಈ ಹಿಂದೆ ಸರ್ಕಾರ ಹೆಲ್ಮೆಟ್​ ಕಡ್ಡಾಯ ಮಾಡಿತ್ತು. ಇದೀಗ ಮತ್ತೊಂದು ಮಹತ್ವದ ಆದೇಶ ಹೊರಬಿದ್ದಿದ್ದು ಇನ್ನು ಮುಂದೆ ಯಾವ ಸವಾರರೂ ಹಾಫ್​ ಹೆಲ್ಮೆಟ್​ ಧರಿಸುವಂತಿಲ್ಲ.

    ಇನ್ನು ಮುಂದೆ ಯಾರಾದರು ಸವಾರರು ಹಾಫ್ ಹೆಲೈಟ್‌ ಧರಿಸಿದ್ದು ಕಂಡು ಬಂದರೆ ಪೊಲೀಸರು ದಂಡ ಹಾಕಲು ಮುಂದಾಗಿದ್ದಾರೆ. ಟೋಪಿ ಮಾದರಿ ಹೆಲ್ಮೆಟ್ ಅನ್ನು ಧರಿಸಿ ವಾಹನ ಚಲಾಯಿಸಿದರೆ ಹೆಲೈಟ್ ರಹಿತ ಚಾಲನೆ ಎಂದೇ ಪರಿಗಣಿಸಲಾಗುತ್ತದೆ.

    ಇನ್ನು ಮುಂದೆ ಹಾಫ್ ಹೆಲ್ಮೆಟ್​ ಧರಿಸಿದ್ದನ್ನು ಹೆಲ್ಮೆಟ್ ಇಲ್ಲದೆ ಸಂಚಾರ ಮಾಡಿದ್ದು ಎಂದೇ ಸಂಚಾರ ಪೊಲೀಸರು ಪರಿಗಣಿಸಲಿದ್ದಾರೆ. ಈಗಾಗಲೇ ಸಿಸಿ ಕ್ಯಾಮರಾ ದೃಶ್ಯ ಆಧಾರದಲ್ಲಿ ಕೇಸ್ ದಾಖಲು ಮಾಡಲಾಗುತ್ತಿದೆ. ಇನ್ನು ಮುಂದೆ ಪೊಲೀಸರು ಸವಾರರನ್ನು ತಡೆದು ಪ್ರಶ್ನಿಸುವುದಿಲ್ಲ. ಬದಲಾಗಿ ನೇರ ಡಿಜಿಟಲ್ ಕ್ಯಾಮರಾ ಸಹಾಯದಿಂದ ಕೇಸ್ ದಾಖಲಿಸಲಾಗುತ್ತೆ. ಮೋಟಾರ್​ ವಾಹನ ಕಾಯ್ದೆ ಪ್ರಕಾರ ಫುಲ್ ಹೆಟ್ ಧರಿಸಬೇಕು.ಇದೀಗ ಪೊಲೀಸರು ಜನರಲ್ಲಿ ಜಾಗೃತಿ‌ ಸಹ ಮೂಡಿಸುತ್ತಿದ್ದಾರೆ‌‌.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts