More

    ಎಚ್‌ಎಎಲ್ ಮತ್ತೊಂದು ಮೈಲಿಗಲ್ಲು: ಯಶಸ್ವಿ ಹಾರಾಟ ನಡೆಸಿದ ತೇಜಸ್ ಎಂಕೆ1ಎ ಯುದ್ಧ ವಿಮಾನ

    ಬೆಂಗಳೂರು ಎಚ್‌ಎಎಲ್ ನಿರ್ಮಿತ ತೇಜಸ್ ಎಂಕೆ1ಎ ವಿಮಾನ ಸರಣಿಯ ಮೊದಲ ಲಘು ಯುದ್ಧ ವಿಮಾನ ಎಲ್‌ಎ5033 ಗುರುವಾರ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಯಶಸ್ವಿಯಾಗಿ ಹಾರಾಟ ನಡೆಸಿತು.

    ಬಳಿಕ 18 ನಿಮಿಷಗಳ ಹಾರಾಟವನ್ನ ನಡೆಸಿತು. ಸಿಎಸ್‌ಐಆರ್-ನ್ಯಾಶನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಜತೆ ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿತ್ತು. 2021ರಲ್ಲಿ ಮಾಡಿಕೊಂಡ ಒಪ್ಪಂದದಂತೆ ನಿರ್ಮಾಣ ಮಾಡಲಾಗಿದೆ.

    ಈ ಕುರಿತು ಮಾತನಾಡಿದ ಎಚ್‌ಎಎಲ್‌ನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತಕೃಷ್ಣನ್, ಜಾಗತಿಕವಾಗಿ ಭೌಗೋಳಿಕ ವಾತಾವರಣದಲ್ಲಿ ಹಾರಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಹಲವು ಸವಾಲುಗಳನ್ನು ನಡುವೆಯೂ ಹಾರಾಡುವ ಏಕಕಾಲೀನ ವಿನ್ಯಾಸ ಮತ್ತು ಅಭಿವೃದ್ಧಿಯೊಂದಿಗೆ ಎಚ್‌ಎಎಲ್ ಈ ಮಹತ್ವದ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ವಿಶೇಷತೆ ಏನು?

    ತೇಜಸ್ ಎಂಕೆ1ಎ ಸುಧಾರಿತ ಎಲೆಕ್ಟ್ರಾನಿಕ್ ರ‌್ಯಾಡರ್, ಯುದ್ಧ, ಸಂವಹನ ವ್ಯವಸ್ಥೆಗಳು, ಹೆಚ್ಚುವರಿ ಯುದ್ಧ ಸಾಮರ್ಥ್ಯ ಮತ್ತು ಸುಧಾರಿತ ನಿರ್ವಹಣಾ ವೈಶಿಷ್ಟ್ಯಗಳನ್ನು ಹೊಂದಿದೆ. ತೇಜಸ್ ಎಂಕೆ1ಎ ಅನ್ನು ಶೀಘ್ರವೇ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡುವುದನ್ನು ದೇಶವು ಎದುರು ನೋಡುತ್ತಿದೆ. ಎಚ್‌ಎಎಲ್‌ನಲ್ಲಿ ಈ ವಿಮಾನದ ಅಧಿಕ ಸಂಖ್ಯೆಯ ಉತ್ಪಾದನೆಯನ್ನು ಕೂಡ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ವಿಮಾನವನ್ನು ನಿವೃತ್ತ ಪೈಲಟ್ ಕ್ಯಾ.ಕೆ.ಕೆ. ವೇಣುಗೋಪಾಲ್ ಮುಖ್ಯ ಪರೀಕ್ಷೆ ನಡೆಸಿದರು. ಹಾಗೆಯೇ ಈ ಯಶಸ್ವಿಗೆ ಕೈಜೋಡಿಸಿರುವ ಭಾರತೀಯ ವಾಯುಪಡೆ, ಡಿಆರ್‌ಡಿಒ/ಎಡಿಎ, ಸೆಮಿಲ್ಯಾಕ್, ಡಿಜಿಎಕ್ಯುಎ ಮತ್ತು ಎಂಎಸ್‌ಎಂಇ ಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts