More

    ಬಾಲಕಿಗೆ ಕೂದಲು ತಿನ್ನುವ ವ್ಯಸನ- ಹೊಟ್ಟೆಯಲ್ಲಿ ರಾಶಿ ರಾಶಿ…

    ಯಾದಗಿರಿ: ತನ್ನ ತಲೆ ಕೂದಲು ತಿನ್ನುವಂಥ ವಿಚಿತ್ರ ವ್ಯಸನಕ್ಕೆ ಅಂಟಿಕೊಂಡಿದ್ದ ಬಾಲಕಿ ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ವಿಬಿಆರ್ ಮುದ್ನಾಳ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಣತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಬದುಕುಳಿಸುವಲ್ಲಿ ಯಶಸ್ವಿಯಾಗಿದೆ.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿರುವ ಮಾಜಿ ಶಾಸಕರಾದ ಆಸ್ಪತ್ರೆ ನಿರ್ದೇಶಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಯುವತಿ ಆಶಾ (ಹೆಸರು ಬದಲಿಸಿದೆ) ತೀವ್ರ ಹೊಟ್ಟೆ ನೋವಿನಿಂದಾಗಿ ನಾಲ್ಕು ದಿನ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಳು. ನೋವಿನ ಕಾರಣ ತಿಳಿಯಲು ಸಾ್ಕೃನಿಂಗ್ಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದುಂಡನೆಯ ಗಡ್ಡೆಯಂತೆ ಕಂಡಿತು ಎಂದರು.

    ಆದರೆ ಹೊಟ್ಟೆಯಲ್ಲಿರುವುದು ಗಡ್ಡೆಯಲ್ಲ ಎಂಬ ಅನುಮಾನ ಕಾಡುತ್ತಿತ್ತು. ಈ ಬಗ್ಗೆ ಆಕೆ ಪೋಷಕರಲ್ಲಿ ಕೇಳಿದಾಗ ಮೂರು ವರ್ಷದವಳಾಗಿದ್ದಾಗಿನಿಂದ ತನ್ನ ತಲೆ ಕೂದಲನ್ನು ತಿನ್ನುವಂಥ ವಿಚಿತ್ರ ವ್ಯಸನಕ್ಕೆ ಅಂಟಿಕೊಂಡಿದ್ದಳು. ಸದ್ಯ ಈಕೆಗೆ 16 ವರ್ಷ ತುಂಬಿದ್ದು, ವ್ಯಸನ ಮಾತ್ರ ಬಿಟ್ಟಿಲ್ಲ ಎಂದಾಗ ವೈದ್ಯರಿಗೆ ಶಾಕ್ ಹೊಡೆದಂತಾಗಿತ್ತು. ವಿಪರೀತ ಹೊಟ್ಟೆ ನೋವು ಇದ್ದುದ್ದರಿಂದ ಶಸ್ತ್ರಚಿಕಿತ್ಸೆ ಮಾಡಲೇಬೇಕಿತ್ತು ಎಂದು ತಿಳಿಸಿದರು.

    ಇದನ್ನೂ ಓದಿ: ಅಯ್ಯೋ ದೇವ್ರೆ ನಾವ್ಯಾಕೆ ಕಳ್ಳರನ್ನು ಹಿಡಿದುಕೊಟ್ವಪ್ಪೋ…

    ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದರಿಂದ ಆಸ್ಪತ್ರೆ ಪರಿಣತ ವೈದ್ಯರಾದ ಡಾ.ಬಸವರಾಜ ನರಸಣಗಿ, ಡಾ.ಅಭಿಷೇಕ ಪಲ್ಲಾ, ಡಾ.ಕ್ಷಿತೀಜ್ ನೇತೃತ್ವದ ತಂಡ ಶುಕ್ರವಾರ ಕೇವಲ ಒಂದು ಗಂಟೆ ಅವಧಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 300 ಗ್ರಾಂ ಕೂದಲಿನ ಎಳೆಗಳನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗುತ್ತಿದ್ದಾಳೆ ಎಂದರು.

    ಇದನ್ನು ವೈದ್ಯಕೀಯ ಭಾಷೆಯಲ್ಲಿ ಟ್ರೈಕೋವೇಜೇರಾ ಎಂದು ಕರೆಯಲಾಗುತ್ತದೆ. ಈ ಹಿಂದೆ ನಾನು ವಿಜಯಪುರದಲ್ಲಿದ್ದಾಗ ಇಂಥ ಸಮಸ್ಯೆಯ ಎರಡು ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

    ವಿಶ್ವದಲ್ಲಿ ಇಂಥ ಅಪರೂಪದ ಪ್ರಕರಣಗಳು ಆಗಾಗ್ಗೆ ಕಂಡು ಬರುತ್ತವೆ. ಕೋವಿಡ್ ಮಧ್ಯೆಯೂ ಯುವ ವೈದ್ಯರು ಈ ಕಠಿಣ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಆಸ್ಪತ್ರೆಗೆ ಕೀತರ್ಿ ತಂದಿದ್ದಾರೆ. ಹೀಗಾಗಿ ವೈದ್ಯರ ತಂಡ ಮತ್ತು ಆಸ್ಪತ್ರೆ ಸಿಬ್ಬಂದಿಗೆ ಅಭಿನಂದಿಸುವುದಾಗಿ ಡಾ.ವೀರಬಸವಂತರಡ್ಡಿ ಮುದ್ನಾಳ್ ಹೇಳಿದರು.

    ವೈದ್ಯರಾದ ಡಾ.ಸಂಗಮ್ಮ ವಿ.ಮುದ್ನಾಳ್, ಡಾ.ಸಿದ್ದವೀರಪ್ಪ, ಮಾರುತಿ ಕಲಾಲ್ ಇದ್ದರು.

    ಸಿರಗುಪ್ಪದಲ್ಲಿ ಮಳೆಗೆ ಕೊಚ್ಚಿ ಹೋದ ಹಳ್ಳದ ಸೇತುವೆ, ಏಳು ತಿಂಗಳಲ್ಲಿ ಮೂರನೇ ಬಾರಿ ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts