More

    ಶರಣರಿಂದ ಸಮಸಮಾಜ ನಿರ್ಮಾಣ ಸಾಧ್ಯ

    ಹಗರಿಬೊಮ್ಮನಹಳ್ಳಿ: ಶರಣ ಸಾಹಿತ್ಯಗಳ ಮೂಲಕ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಶಸಾಪ ತಾಲೂಕು ಘಟಕದ ಅಧ್ಯಕ್ಷೆ ಇಂದುಮತಿ ಪಾಲ್ತೂರುಮಠ್ ಹೇಳಿದರು.


    ಇದನ್ನೂ ಓದಿ: ಜಿಲ್ಲಾ ಕಸಾಪ ! ಮೈಲಾರಪ್ಪ ಮೆಣಸಗಿ ದತ್ತಿ ಉಪನ್ಯಾಸ


    ಪಟ್ಟಣದ ಶ್ರೀರೇಣುಕ ಪಿಯು ಕಾಲೇಜಿನಲ್ಲಿ ಅಖಿಲ ಭಾರತ ಶಸಾಪ ತಾಲೂಕು ಘಟಕ, ತಾಲೂಕು ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಲಿಂ.ಕೆ.ಎಂ.ಮಲ್ಲಿಕಾರ್ಜುನಗೌಡರ ಸ್ಮರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಕರ್ನಾಟಕ ಇತಿಹಾಸದಲ್ಲಿ 12ನೇ ಶತಮಾನಕ್ಕೆ ಬಹಳ ಮಹತ್ವದ ಸ್ಥಾನವಿದೆ. ಜಗದ್ಗುರು ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರು 1986ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಶರಣರ ಆದರ್ಶ, ಆಚರಣೆಗಳು ನುಡಿದಂತೆ ನಡೆಯುವ ಗುಣಗಳು ಕಾಯಕ ನಿಷ್ಠೆ ಇವುಗಳನ್ನು ವಿಶ್ವದಾದ್ಯಂತ ಪ್ರಸರಿಸುವ ಸದುದ್ದೇಶದ ದೃಷ್ಠಿಕೋನದಿಂದ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಕದಳಿ ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ವಚನಗಳ ಪ್ರಸಾರವನ್ನು ನಡೆಸಲಾಗುವುದು ಎಂದರು.

    ಪ್ರಾಧ್ಯಾಪಕ ಡಾ.ಅಕ್ಕಿ ಬಸವೇಶ್, ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಸವಿತಾ, ಶರಣ ಪರಿಷತ್ತು ತಾಲೂಕು ಘಟಕದ ಕಾರ್ಯದರ್ಶಿ ಪುಷ್ಪಾರೆಡ್ಡಿ , ಮಧುರೆಡ್ಡಿ, ಲಕ್ಷ್ಮೀ ರೆಡ್ಡಿ, ಮಂಜುಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts