More

    ಜಿಲ್ಲಾ ಕಸಾಪ ! ಮೈಲಾರಪ್ಪ ಮೆಣಸಗಿ ದತ್ತಿ ಉಪನ್ಯಾಸ

    ವಿಜಯವಾಣಿ ಸುದ್ದಿಜಾಲ ಗದಗ
    ಕನ್ನಡ ಇತಿಹಾಸದಲ್ಲಿ ಜಾನಪದ ಸಾಹಿತ್ಯ ಪ್ರಾರಂಭವಾಗುವುದು ಭೌಧ್ದ ಧರ್ಮದ ಅವಸಾನದ ನಂತರ. ಒಂದರಿಂದ ನಾಲ್ಕನೇ ಶತಮಾನದಲ್ಲಿ ಹಲವು ಜನಪದರ ಸ್ಥಾನಗಳಿದ್ದವು. ವಾಹಿನಿಗಳು ಅದರಲ್ಲಿ ಪ್ರಮುಖವಾದವು ಎಂದು ಡಾ.ಸಿದ್ದಣ್ಣ ಜಕಬಾಳ ಹೇಳಿದರು.
    ಗದಗ ಜಿಲ್ಲಾ ಕಸಾಪದಲ್ಲಿ ಭಾನುವಾರ ಜರುಗಿದ ಮೈಲಾರಪ್ಪ ಮೆಣಸಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವಕ್ಕುಂದ, ಪಟ್ಟದಕಲ್ಲು ಮತ್ತು ಲೆ$್ಮಶ್ವರವು ತಿರುಳ್ಗನ್ನಡ ನಾಡಾಗಿತ್ತು. ಒಟ್ಟು 24 ಲಯಗಳು ಕನ್ನಡದ ಮೂಲ ಲಯಗಳಿವೆ. ಒಂದು ಹಾಡುವ ಮತ್ತು ಓದುವ ಕಾವ್ಯ. ಇನೊಂದು ಬರೀ ಹಾಡುವ ಕಾವ್ಯವಿದೆ. ಪಂಡಿತ ಕವಿಗಳು ಜನಪದ ಕವಿಗಳನ್ನು ಅಪಹಾಸ್ಯ ಮಾಡಿದ್ದರು. ಶರ ಕುಸುಮ ಭೋಗ ಭಾಮಿನ ವಾರ್ಧಕ ಪರಿವಧಿರ್ನಿ ಷಟ್ಪದಿಗಳಲ್ಲಿ ಭಾಮಿನಿ ಷಟ್ಪದಿ ಅತಿ ಹೆಚ್ಚು ಬಳಕೆಯಲ್ಲಿ ಬಂದಿತು ಎಂದು ಹೇಳಿದರು.
    ಶಾಂತಲಾ ಹಂಚಿನಾಳ ಮಾತನಾಡಿ, ಮುದ್ರಣ ೇತ್ರದಲ್ಲಿ ತಮ್ಮದೇ ಆದ ವಿಶಿಷ್ಠ ಸಾಧನೆ ಮಾಡಿದ ಮೆಣಸಗಿ ಮೈಲಾರೆಪ್ಪನವರು ಮೈಲಾರಲಿಂಗೇಶ್ವರನ ಅನನ್ಯ ಭಕ್ತರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಕಷ್ಟಗಳನ್ನು ಅನುಭವಿಸಿದ್ದರು. ಪುಸ್ತಕ ಮಾರಾಟಗಾರರಾಗಿ ಕಾಯಕ ಪ್ರಾರಂಭಸಿ ಜಾತ್ರೆ, ಉತ್ಸವಗಳಲ್ಲಿ ಕ್ಯಾಲೆಂಡರ್​, ಡೈರಿ ಕಥಾ ಪುಸ್ತಕಗಳನ್ನು ಮಾರಿ ಪ್ರಕಾಶನ ಸಂಸ್ಥೆಯನ್ನು ಆರಂಭಿಸುವ ಮಟ್ಟಕ್ಕೆ ಬೆಳೆದರು ಎಂದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮೈಲಾರೆಪ್ಪ ಮೆಣಸಗಿ ಅವರ ಹೆಸರಿನಲ್ಲಿ ಸಮಾಜಕ್ಕೆ ಪ್ರಶಸ್ತಿಯ ಗರಿ ಮೂಡಲಿ. ಮುದ್ರಣ ೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರ ಹೆಸರಿನಲ್ಲಿ ಪ್ರತಿವರ್ಷ ಸಂಸ್ಮರಣೆಯ ದಿನದಂದು ಪ್ರಶಸ್ತಿ ನೀಡುವ ದಿಸೆಯಲ್ಲಿ ಜಯದೇವ ಮೆಣಸಗಿಯವರು ಚಿಂತನೆ ಮಾಡಬೇಕು ಎಂದರು.
    ಜಯದೇವ ಮೆಣಸಗಿ, ಶಿವಾನಂದ ಗಿಡ್ನಂದಿ, ಡಾ. ದತ್ತಪ್ರಸನ್ನ ಪಾಟೀಲ, ಪ್ರೊ. ಕೆ. ಎಚ್​. ಬೇಲೂರ, ಡಾ. ಜಿ. ಬಿ. ಪಾಟೀಲ, ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ, ಪ್ರೊ. ಅನ್ನದಾನಿ ಹಿರೇಮಠ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts