More

    ನಂದಿಪುರ ಶ್ರೀಮಠದಿಂದ ಸಮಾಜಮುಖಿ ಕಾರ್ಯ; ಹಗರಿಬೊಮ್ಮನಹಳ್ಳಿ ಶಾಸಕ ಶಾಸಕ ಎಸ್.ಭೀಮನಾಯ್ಕ ಗುಣಗಾನ

    ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

    ಹಗರಿಬೊಮ್ಮನಹಳ್ಳಿ: ನಂದಿಪುರ ಶ್ರೀಮಠ ವಿದ್ಯಾ ದಾನ, ಅನ್ನ ದಾಸೋಹ ನಿರಂತರವಾಗಿಸಿ ಸಮಾಜಮುಖಿಯಾಗಿದೆ ಎಂದು ಶಾಸಕ ಎಸ್.ಭೀಮನಾಯ್ಕ ಹೇಳಿದರು.

    ತಾಲೂಕಿನ ನಂದಿಪುರ ಗ್ರಾಮದಲ್ಲಿ ದೊಡ್ಡಬಸವೇಶ್ವರ ಜಾತ್ರೋತ್ಸವ ನಿಮಿತ್ತ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಮಠ ನಿರಂತರವಾಗಿ 13 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ, ಆರೋಗ್ಯದ ಉಚಿತ ಶಿಬಿರ, ರಕ್ತದಾನ ಶಿಬಿರ, ಕೃಷಿಮೇಳ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಾದರಿಯಾಗಿದೆ. ಮಹೇಶ್ವರ ಸ್ವಾಮೀಜಿಯವರು ಸಾವಯವ ಕೃಷಿ ಮಾಡುತ್ತ ರೈತರಿಗೆ ಮಾರ್ಗರ್ದಶನ ನೀಡುತ್ತಿದ್ದಾರೆ. ನೀರಾವರಿ ಮತ್ತಿತರ ಹೋರಾಟಗಳನ್ನು ಬೆಂಬಲಿಸಿದ್ದಾರೆ ಎಂದರು.

    ಡಾ.ಮಹೇಶ್ವರ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಮಾತನಾಡಿದರು. ಸ್ಥಳ ದಾನಿ ಗೊಗ್ಗ ಚನ್ನಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. 24 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು. ಸೊನ್ನ ಗ್ರಾಮದ ಸೊಲ್ಲಮ್ಮದೇವಿ ಮಹಿಳಾ ಸಂಘದವರು ಸೋಬಾನೆಪದ ಹಾಡಿ ಗಮನಸೆಳೆದರು. ಚಲನಚಿತ್ರ ನಿರ್ದೇಶಕ ಆದಿತ್ಯ ಚಿಕ್ಕಣ್ಣ, ಹಿರಿಯ ಸಾಹಿತಿ ಎಸ್.ವಿ.ಪಾಟೀಲ್ ಗುಂಡೂರು, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪುರಸಭೆ ಸದಸ್ಯರಾದ ವಿ.ಮರಿರಾಮಪ್ಪ, ಡಿ.ಎಂ.ಅಜೀಜುಲ್ಲಾ, ಮುಖಂಡರಾದ ನಂದಿಪುರ ಯಮುನಪ್ಪ, ಚಿಂತ್ರಪಳ್ಳಿ ದೇವೆಂದ್ರಪ್ಪ, ಉಪ್ಪಾರ ಬಾಳಪ್ಪ ಇತರರಿದ್ದರು ಬ್ಯಾಲಾಳು ಕರಿಬಸವಗೌಡ, ಶಾರದಾ ಮಂಜುನಾಥ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts