More

    ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ ಎಚ್.ಡಿ. ರೇವಣ್ಣ!

    ಹಾಸನ: ಜೆಡಿಎಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಇದೀಗ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರದಿದ್ದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ರೇವಣ್ಣ ಘೋಷಿಸಿದ್ದಾರೆ.

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಕ್ರಮ ಕೈಗೊಂಡಿದ್ದು ಮುಂದಿನ ಚುನಾವಣೆಗಳಲ್ಲಿ ಹೇಗೆ ಗೆಲ್ಲಬೇಕೆಂಬುದು ಗೊತ್ತಿದೆ. ಅದಕ್ಕಾಗಿ ಈಗಿನಿಂದಲೇ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅಂದುಕೊಂಡದ್ದು ಸಾಧ್ಯವಾಗದಿದ್ದರೆ ನಾನು ರಾಜಕೀಯದಲ್ಲಿಯೇ ಇರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

    ‘ಆಕಸ್ಮಿಕವಾಗಿ ಶಾಸಕನಾಗಿ ಆಯ್ಕೆಯಾಗಿರುವ ಸ್ಥಳೀಯ ಶಾಸಕರಿಗೆ ಆಡಳಿತ ಅನುಭವ ಇದೆಯಾ? ನಮ್ಮವರ ತಪ್ಪಿನಿಂದಲೇ ಹಾಸನ ಕ್ಷೇತ್ರ ಕೈ ತಪ್ಪಿತು. ಲೆಟರ್ ಬರೆದು ಅಭಿವೃದ್ಧಿಗೆ ಅಡ್ಡಗಾಲಾಗುವುದನ್ನು ಇನ್ನಾದರು ಬಿಡಲಿ’ ಎಂದು ಶಾಸಕ ಪ್ರೀತಂ ಜೆ. ಗೌಡ ವಿರುದ್ಧ ಹರಿಹಾಯ್ದರು.

    ಇದನ್ನೂ ಓದಿ: ಕೋವಿಡ್ ಲಸಿಕೆಯಿಂದ ಅಲರ್ಜಿ ಆಗುತ್ತಂತೆ!: ತಜ್ಞರ ಈ ಎಚ್ಚರಿಕೆ ನಿಮ್ಮ ಗಮನದಲ್ಲಿರಲಿ…

    ಪತ್ರ ಬರೆದು ಎಲ್ಲದಕ್ಕೂ ತಡೆ ನೀಡುವ ಬುದ್ಧಿ ನನಗೆ ಇದ್ದಿದ್ದರೆ ನಿತ್ಯ ಅದೇ ಕೆಲಸ ಮಾಡುತ್ತಿದ್ದೆ. ಆದರೆ, ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಚನ್ನಪಟ್ಟಣ ಕೆರೆ ಅಭಿವೃದ್ಧಿಗಾಗಿ 144 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ಪಡೆಯಲಾಗಿತ್ತು. ಆದರೆ ಅದಕ್ಕೆ ಕೊಕ್ಕೆ ಹಾಕಿದ ಶಾಸಕ ಅನುದಾನವನ್ನು ಇತರ ಕೆರೆ, ಪಾರ್ಕ್‌ಗಳಿಗೆ ಹಂಚಿದರು. ಕಾಳಜಿ ಇದ್ದಿದ್ದರೆ ಪಾರ್ಕ್ ಅಭಿವೃದ್ಧಿಗೆ ಬೇರೆ ಅನುದಾನ ತರಬೇಕಿತ್ತು ಎಂದು ಕುಟುಕಿದರು.

    ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ.75ರಷ್ಟು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಳ್ಳಿಹಳ್ಳಿಯಲ್ಲಿ ಪ್ರಚಾರ ನಡೆಸಿದರೂ ಪ್ರಯೋಜನವಾಗಿಲ್ಲ. ಬಿಜೆಪಿಯವರು ಜಿಲ್ಲೆಯ ಎಲ್ಲ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿ ಖರ್ಚು ಮಾಡಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿ 8ರಿಂದ 10 ಲಕ್ಷ ರೂ. ಖರ್ಚಾಗಿದೆ. ಇಷ್ಟೆಲ್ಲ ಅವಾಂತರ ನಡೆದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿತ್ತು ಎಂದು ಆರೋಪಿಸಿದರು.

    ಯುವ ಧೂಮಪಾನಿಗಳಿಗಿದು ‘ಉಸಿರುಗಟ್ಟಿಸೋ’ ಸುದ್ದಿ; ಅವರನ್ನೇ ಗುರಿಯಾಗಿಸಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!

    ದೇವರನ್ನೇ ಅಪಹಾಸ್ಯ ಮಾಡಲು ಹೋಗಿ ಅರೆಸ್ಟ್ ಆದ ಕಾಮಿಡಿಯನ್​; ಷಾಗೂ ಟೀಕೆ… ಐವರ ಬಂಧನ

    ಪ್ರಿಯಕರನಿಂದ ಮಗಳನ್ನೇ ರೇಪ್​ ಮಾಡಿಸಿದ ತಾಯಿ! 15 ವರ್ಷಕ್ಕೇ ಮಗುವಿಗೆ ಜನ್ಮ ನೀಡಿದ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts