More

    ಉರೀಗೌಡ, ನಂಜೇಗೌಡರ ದೇವಸ್ಥಾನವನ್ನೇ ಮಾಡಲಿ: ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

    ಮಂಡ್ಯ: ರಾಜ್ಯದಲ್ಲಿ ಆಲಿಕಲ್ಲು ಮಳೆ ಬಿದ್ದು ಜನ ಸಾಯುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಉರೀಗೌಡ, ನಂಜೇಗೌಡ ಕಥೆ ಕಟ್ಟಿಕೊಂಡೇ ಇರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
    ತಾಲೂಕಿನ ವಿ.ಸಿ ಫಾರಂನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಏನು ಕೆಲಸ ಇಲ್ಲ. ಆದ್ದರಿಂದ ಉರೀಗೌಡ, ನಂಜೇಗೌಡ ವಿಚಾರ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಇಲ್ಲಿ ಸಮಸ್ಯೆಗಳಿಂದ ಸಾಯ್ತ ಇದ್ದಾನಲ್ಲ ಹೊಲ ಉಳುವ ಬೋರೇಗೌಡನನ್ನು ನೋಡಲಿ. ಆ ಬಳಿಕ ಅವರಿಬ್ಬರು ಇದ್ದರೋ, ಇಲ್ವೋ ಎಂಬುದನ್ನು ಹುಡುಕೊಣ ಎಂದು ಟೀಕಿಸಿದರು.
    ವಾಸ್ತವತೆಯನ್ನು ನೋಡಬೇಕೊ ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಸಸ್ಥ್ಯ ಕೊಡಬೇಕಾ?. ಸಿನಿಮಾ ಯಾವನು ಮಾಡುತ್ತಾನೋ ಅದು ಅವನಿಗೆ ಸೇರಿದ್ದು. ಸಿನಿಮಾ ಕಥೆ ಏನು ಸತ್ಯವಲ್ಲ. ಕಾಲ್ಪನಿಕ ವಿಚಾರ ಇಟ್ಟುಕೊಂಡು ಮಾಡುತ್ತಾರೆ. ನಾನು ಚುನಾವಣೆ ನಡೆಸಬೇಕು. ಬಿಜೆಪಿಯವರು ಮಂಡ್ಯದಲ್ಲಿ ಉರೀಗೌಡ, ನಂಜೇಗೌಡರ ಪ್ರತಿಮೆ ಇಲ್ಲದಿದ್ದರೆ ದೊಡ್ಡ ದೇವಸ್ಥಾನವನ್ನೇ ನಿರ್ಮಾಣ ಮಾಡಿಕೊಳ್ಳಲಿ. ಈ ವಿಚಾರದಿಂದ ಚುನಾವಣೆಯಲ್ಲಿ ಯಾವುದೇ ವರ್ಕೌಟ್ ಆಗಲ್ಲ. ಈಗಿನ ಜನರ ಕಷ್ಟ ನೋಡದೆ, ಹಳೆ ಕಥೆ ಇಟ್ಟುಕೊಂಡು ಬಂದರೆ ಜನರು ಮತ ಹಾಕುತ್ತಾರಾ ಎಂದ ಅವರು, ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರೀಗೌಡ, ನಂಜೇಗೌಡ ಕುತ್ತಿಗೆ ಕುಯ್ದರು ಎಂದು ಏನಾದರೂ ಇದಿಯಾ. ಇಲ್ಲ ಯುದ್ದ ಮಾಡಿ ತಲೆ ತೆಗೆದಿದ್ದರು ಎಂದಿದೆಯೇ ಎಂದು ಪ್ರಶ್ನಿಸಿದರು.
    ಜೆಡಿಎಸ್ ಪುಟ್ಕೋಸಿ ಪಕ್ಷ ಎಂಬ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಚುನಾವಣೆ ಆದ ಬಳಿಕ ಯಾವುದು ಪುಟ್ಕೋಸಿ ಪಕ್ಷವೆಂದು ಜನರೇ ಹೇಳುತ್ತಾರೆ. ಇವರೆಲ್ಲರನ್ನು ಜನರು ಎಲ್ಲಿಗೆ ಕಳುಹಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡುವುದಕ್ಕೆ ಕ್ಷೇತ್ರವೇ ಸಿಗುತ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಿ ನಿಲ್ಲಿಸಬೇಕೆಂದು ಸ್ಪಷ್ಟತೆ ಸಿಕ್ಕಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡ್ತಾರಾ?. ಮೊದಲು ಅವರ ಪುಟ್ಕೋಸಿ ಹೇಗಿದೆ ಎಂದು ನೋಡಿಕೊಳ್ಳಲೆಂದು ತಿರುಗೇಟು ನೀಡಿದರು.
    ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪಕ್ಷ ಯಾವಾಗ ಪಟ್ಟಿ ಬಿಡುಗಡೆ ಮಾಡುತ್ತಾರೋ, ಹೇಗೆ ಮಾಡುತ್ತಾರೋ ಗೊತ್ತಿಲ್ಲ. ಅದಕ್ಕೂ ನನಗೆ ಸಂಬಂಧ ಇಲ್ಲ. ಚುನಾವಣೆಯಲ್ಲಿ ಆಯಾಯ ಪಕ್ಷಗಳು ಹೋರಾಟ ಮಾಡಬೇಕು. ಯಾವಾಗ ಪಟ್ಟಿ ಬಿಡುಗಡೆ ಮಾಡಬೇಕು, ಘೋಷಣೆ ಮಾಡಬೇಕು ಎನ್ನುವ ಲೆಕ್ಕಾಚಾರ ಅವರೇ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಬಿ ಫಾರ್ಮ್ ಆಕಾಂಕ್ಷಿತನ್ನು ಸೆಳೆಯುವುದಕ್ಕೆ ಜೆಡಿಎಸ್ ಆಯಸ್ಕಾಂತವಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts