More

    ಗುರುಶಿಷ್ಯರ ಸಂಬಂಧ ಅವಿನಾಭಾವ

    ಕಬ್ಬೂರ: ಪಟ್ಟಣದ ಚಿಕ್ಕೋಡಿ ಲಿಬರಲ್ ಎಜುಕೇಶನ್ ಸೊಸೈಟಿಯ ನ್ಯೂ ಹೈಸ್ಕೂಲ್ ಕಬ್ಬೂರ ಶಾಲೆಯ 1968- 69ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹಾನುಬಂಧ ಕಾರ್ಯಕ್ರಮ ಭಾನುವಾರ ಜರುಗಿತು.

    ಗೌರಿಶಂಕರ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರು-ಶಿಷ್ಯರ ಪರಂಪರೆ ಪ್ರಾಚೀನ ಕಾಲದಿಂದಲೂ ಬೆಳೆಯುತ್ತ ಬಂದಿದ್ದು, ಇಂದಿಗೂ ಉಳಿದುಕೊಂಡಿದೆ ಎಂದರು. ಕೆ.ಎಂ.ಬೆಲ್ಲದ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎ.ಗಾವಡೆ, ಡಾ.ರವಿ ಕುರಬೇಟ ಮಾತನಾಡಿದರು. ಶ್ರೀಗಳು ಮತ್ತು ಗುರುಗಳಾದ ಎಸ್.ಎಲ್.ದೊಡ್ಡಮನಿ ಅವರ ಪಾದಪೂಜೆ ಹಾಗೂ ಸತ್ಕಾರ ನೆರವೇರಿತು.

    ಎಲ್ಲರಿಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ಡಾ.ಮಹೇಂದ್ರ ಕೆ.ಆರ್., ಮಹಾಲಿಂಗ ಹಂಜಿ, ರಮೇಶ ಬಸ್ತವಾಡೆ , ಸುರೇಶ ಬೆಲ್ಲದ, ರಮೇಶ ಬೆಲ್ಲದ, ಪ್ರಕಾಶ ಬೆಲ್ಲದ, ಮಲ್ಲಪ್ಪ ಗೊಜುಗೊಜಿ, ಭರಮಪ್ಪ ಖಂಡೇಕರ, ಅಪ್ಪಣ್ಣ ಕಾಡೇಶಗೋಳ, ಶಂಕರ ಗುಡಿತೋಟ, ಬೀರಪ್ಪ ಮದಿಹಳ್ಳಿ, ಅಜ್ಜಪ್ಪ ಒಡೆಯರ, ಶಿವಪ್ಪ ಪಾಟೀಲ, ವಿಮಲಾ ಖೇಮಲಾಪುರೆ, ರಾಜು ಮಹಿಪತಿ, ಪುರಂದರ ಕೇಸ್ತಿ ಇತರರಿದ್ದರು. ಮಹೇಶ ಗೊಜಗೊಜಿ ನಿರೂಪಿಸಿದರು. ಸಿದ್ದಪ್ಪ ಮುರಚಿಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts