More

    ಗುರುಗುಂಟಾದಲ್ಲಿ ಮಹಾಮಂಡಲ ಪೂಜೆ

    ಗುರುಗುಂಟಾ: ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸೋಮನಾಥ ನಗರದಲ್ಲಿ ನಿರ್ಮಿಸಿರುವ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರ ಜನರನ್ನು ಸೆಳೆಯುತ್ತಿದೆ.

    ಪಟ್ಟಣದ ಕೃಷ್ಣ ಶ್ರೇಷ್ಠಿ ಈ ದೇವಸ್ಥಾನದ ನಿರ್ಮಾತೃ ಆಗಿದ್ದಾರೆ. ನಾಸ್ತಿಕರಾಗಿದ್ದ ಕೃಷ್ಣ ಶ್ರೇಷ್ಠಿ ಜೀವನದ ಘಟನಾವಳಿಗಳಿಂದ ಪ್ರೇರಿತರಾಗಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರ ನಿರ್ಮಿಸಿದ್ದಾರೆ. ಅಯ್ಯಪ್ಪಸ್ವಾಮಿ ಮಾಲಾಧಾರಣೆ ಮಾಡಿ ವ್ರತಾಚರಣೆ ಬಳಿಕ ಇಷ್ಟಾರ್ಥಗಳು ಈಡೇರಿವೆ. ಈ ಮೂಲಕ ನಾಸ್ತಿಕರಾಗಿದ್ದ ಕೃಷ್ಣ ಶ್ರೇಷ್ಠಿ ಅಯ್ಯಪ್ಪಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಶಬರಿಮಲೆ ಮಾದರಿಯಲ್ಲೇ ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಿದ್ದಾರೆ.

    ತಿಂಥಣಿ ಮೌನೇಶ್ವರ ಹಾಗೂ ಕಲಬುರಗಿ ಶರಣಬಸವೇಶ್ವರ ದೇವಸ್ಥಾನಗಳಿಗೆ ಪಾದಯಾತ್ರೆ ತೆರಳುವ ಭಕ್ತರು ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ತಂಗುತ್ತಾರೆ. ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಸಿಸಿ ರಸ್ತೆ, ಸಭಾ ಮಂಟಪ, ಭೋಜನಾಲಯ, ಆವರಣ ಗೋಡೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರ ಹೆಸರಿನ ಟ್ರಸ್ಟ್ ರಚಿಸಲಾಗಿದ್ದು, ವಿಶೇಷ ದಿನಗಳಲ್ಲಿ ಭಜನೆ, ಪೂಜೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

    ಧ್ಯಾನ ಮಂದಿರದಲ್ಲಿ ಡಿ.25ರಂದು ಮಹಾಮಂಡಲ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 5ಕ್ಕೆ ರುದ್ರಾಭಿಷೇಕ, ಅಷೊ್ಟೀೀತ್ತರ ಪೂಜೆ,ನಂತರ ಲೇಕಂಚೇರಿ ಹನುಮಂತ ದೇವಸ್ಥಾನದಿಂದ ಕಳಸ, ವಾದ್ಯ ಮೇಳದೊಂದಿಗೆ ಅಯ್ಯಪ್ಪಸ್ವಾಮಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಸಂಜೆ ಭಜನಾ ತಂಡಗಳಿಂದ ಭಜನೆ, ಪಡಿಪೂಜೆ ನಡೆಯಲಿದೆ. ಯರಡೋಣಾ, ಹೊನ್ನಳ್ಳಿ, ಹಟ್ಟಿ, ಲಿಂಗಸುಗೂರು, ಮುದಗಲ್, ಸಂತೆಕೆಲ್ಲೂರ, ಮಸ್ಕಿ, ಗುರುಸ್ವಾಮಿಗಳು ಹಾಗೂ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಧ್ಯಾನಮಂದಿರದ ಅಧ್ಯಕ್ಷ, ಗುರುಸ್ವಾಮಿ ಕೃಷ್ಣಶೆಟ್ಟಿ ಕಿನ್ನಾಳ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts