More

    ನಟ ಅಗೆದು ಉಗುಳಿದ ಚೂಯಿಂಗ್ ಗಮ್​ಗೆ ದುಬಾರಿ ಬೆಲೆ; 32 ಲಕ್ಷ ರೂ. ನಿಂದ ಹರಾಜು ಪ್ರಾರಂಭ!

    ಅಮೆರಿಕಾ: ಹಾಲಿವುಡ್ ಸಿನಿಮಾದ ಐರನ್ ಮ್ಯಾನ್ ಪಾತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಾಲಿವುಡ್​ನ ನಟ ರಾಬರ್ಟ್ ಡೌನಿ ಜೂನಿಯರ್ ಅವರು ಐರನ್ ಮ್ಯಾನ್ ಪಾತ್ರದಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈ ನಟ ತಿಂದ ಅಗೆದು ಉಗುಳಿದ ಚೂಯಿಂಗ್​ ಗಮ್​ ದುಬಾರಿ ಬೆಲೆಗೆ ಹರಾಜು ಹಾಕಲಾಗುತ್ತಿದೆ.

    ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ನಟ ರಾಬರ್ಟ್ ಡೌನಿ ಜೂನಿಯರ್ ತಿಂದೆಸೆದ ಚೂಯಿಂಗ್ ಗಮ್ ತನ್ನ ಬಳಿ ಇದೆ ಎಂದು ಇದೆ ಎಂದು ಅಭಿಮಾನಿಯೊಬ್ಬ ಹೇಳಿಕೊಂಡಿದ್ದಾನೆ. ಗಮ್ ಅನ್ನು ದೃಢೀಕರಿಸಲು ಯಾವುದೇ ಮಾರ್ಗವಿಲ್ಲದಿದ್ದರೂ, ಅದರ ಮೇಲೆ ಡೌನಿಯವರ DNA ಇದೆಯೇ ಎಂದು ಪರೀಕ್ಷಿಸಬಹುದು ಎಂದು ಹೇಳಿದ್ದಾನೆ. ಈಗ ಇದೆ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇರಿಸಿದ್ದಾನೆ.

    ಇದನ್ನೂ ಓದಿ:  25ನೇ ಸಿನಿಮಾ ರಿಲೀಸ್ ಶುಭ ಸಂದರ್ಭದಲ್ಲಿ 1 ಕೋಟಿ ರೂ. ಬೆಲೆಬಾಳುವ ಕಾರಿಗೆ ಒಡೆಯನಾದ ಡಾಲಿ
    ಈ ಚೂಯಿಂಗ್ ಗಮ್ ಹರಾಜಿನಲ್ಲಿ ಈಗ $40,000 (Rs 32,56,227) ರೂ. ಕ್ಕಿಂತ ಹೆಚ್ಚು ಆರಂಭಿಕ ಬಿಡ್‌ನಲ್ಲಿದೆ. ಏಪ್ರಿಲ್ 1 ರಂದು ಹರಾಜು ಕೊನೆಗೊಳ್ಳಲಿದೆ. ಈ ಗಮ್ ಅನ್ನು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಅದೃಷ್ಟದ ಬಿಡ್ಡರ್‌ಗೆ ರವಾನಿಸಲಾಗುತ್ತದೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

    ಇದನ್ನೂ ಓದಿ:  ಎಸ್​ಎಸ್​ಎಲ್​ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ!
    ಇದೊಂದು ವಿಚಿತ್ರ ಸುದ್ದಿಯಾಗಿದೆ. ಒಬ್ಬ ವ್ಯಕ್ತಿ ಅಗೆದು, ಉಗುಳಿದ ಗಮ್ ಅನ್ನು ನಾನು ಇಂದಿಗೂ ಖರೀದಿ ಮಾಡುವುದಿಲ್ಲ, ಚೀ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಾ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

    19 ಕೆಜಿ ಚಿನ್ನದಿಂದ ತಯಾರಾಗಿದೆ 530 ಪುಟಗಳ ರಾಮಾಯಣ; ಈ ಪುಸ್ತಕಕ್ಕೆ ಇದೆ ಇತಿಹಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts