More

    ಗೂಳೂರು ಮಹಾಗಣಪತಿ ನಿಮಜ್ಜನ ಮಹೋತ್ಸವ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ, ವರ್ಣರಂಜಿತ ಮದ್ದುಗುಂಡಿನ ಅಬ್ಬರ

    ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

    ಗೂಳೂರು ಮಹಾಗಣಪತಿ ನಿಮಜ್ಜನ ಮಹೋತ್ಸವ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ, ವರ್ಣರಂಜಿತ ಮದ್ದುಗುಂಡಿನ ಅಬ್ಬರ

    ಬಲಿಪಾಢ್ಯಮಿ ದಿನದಂದು ಪ್ರತಿಷ್ಠಾಪನೆಗೊಂಡ ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡು, ಭಾನುವಾರ ರಾತ್ರಿ ಗೂಳೂರು ಕೆರೆಯಲ್ಲಿ ವರ್ಣರಂಜಿತ ಸಿಡಿಮದ್ದಿನ ಅಬ್ಬರದ ನಡುವೆ ಮೂರ್ತಿಯನ್ನು ನಿಮಜ್ಜನ ಮಾಡಲಾಯಿತು.

    ಗೂಳೂರು ಮಹಾಗಣಪತಿ ನಿಮಜ್ಜನ ಮಹೋತ್ಸವ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ, ವರ್ಣರಂಜಿತ ಮದ್ದುಗುಂಡಿನ ಅಬ್ಬರ

    ಎರಡು ದಿನ ನಡೆದ ಜಾತ್ರೆಯಲ್ಲಿ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಪೂಜಾ ಕೈಂಕರ್ಯದ ನಂತರ ಹೊನ್ನೇನಹಳ್ಳಿಯ 18 ಕೋಮಿನ ಜನರು ಮಹಾಗಣಪತಿಯನ್ನು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ಮಧ್ಯರಾತ್ರಿವರೆಗೂ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

    ಗೂಳೂರು ಮಹಾಗಣಪತಿ ನಿಮಜ್ಜನ ಮಹೋತ್ಸವ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ, ವರ್ಣರಂಜಿತ ಮದ್ದುಗುಂಡಿನ ಅಬ್ಬರ

    ಗಣೇಶಮೂರ್ತಿ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಗ್ರಾಮದ ಜನತೆ ಮತ್ತು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಪೂಜೆ ಸಲ್ಲಿಸಿದರು. ಭಕ್ತಾದಿಗಳ ಹರ್ಷೋದ್ಘಾರ ನಡುವೆ ಮಹಾಗಣಪತಿ ವಿಸರ್ಜಿಸಲಾಯಿತು.

    ಬರೋಬ್ಬರಿ 187 ನಾಣ್ಯಗಳನ್ನು ನುಂಗಿದ ಭೂಪ! ಸಾವಿನ ದವಡೆಯಿಂದ ಪಾರಾಗಿದ್ದೇ ರೋಚಕ… ಬಾಗಲಕೋಟೆಯಲ್ಲಿ ಘಟನೆ

    ಹೊನ್ನಾಳಿಯಲ್ಲಿ ಭೀಕರ ಅಪಘಾತ, ASI ಪುತ್ರ ಸಾವು: ರೇಣುಕಾಚಾರ್ಯರ ಸಹೋದರನ‌ ಪುತ್ರನ ಪ್ರಕರಣ ನೆನಪಿಸುತ್ತಿದೆ ಈ ದುರ್ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts