More

    62,910 ಮೆಗಾವಾಟ್ ವಿದ್ಯುತ್ ಉತ್ಪಾದನೆ

    ಗೊಳಸಂಗಿ: ದೇಶಾದ್ಯಂತ ಎನ್‌ಟಿಪಿಸಿ ಕಂಪನಿ 62,910 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದೆ ಎಂದು ಎನ್‌ಟಿಪಿಸಿ ನವದೆಹಲಿ ಕೇಂದ್ರ ಘಟಕದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗುರುದೀಪ್ ಸಿಂಗ್ ಹೇಳಿದರು.

    ಸಮೀಪದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಶನಿವಾರ ನಡೆದ 45ನೇ ರೈಸಿಂಗ್ ಡೇ ನಿಮಿತ್ತ ನವದೆಹಲಿಯಿಂದ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನೌಕರರನ್ನುದ್ದೇಶಿಸಿ ಅವರು ಮಾತನಾಡಿದರು.

    2032ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಆಧಾರಿತ ಉತ್ಪಾದನಾ ಸಾಮರ್ಥ್ಯ ತಲುಪಲು ಎನ್‌ಟಿಪಿಸಿ ಶೇ.30 ರಷ್ಟು ಬಂಡವಾಳ ಹೊಂದಿದೆ ಎಂದರು.

    ಕೂಡಗಿ ಸ್ಥಾವರದ ಮುಖ್ಯ ನಿರ್ವಾಹಕ ನಿರ್ದೇಶಕ (ಸಿಜಿಎಂ)ಮ್ಯಾಥ್ಯೂ ವರ್ಗೀಸ್ 45ನೇ ರೈಸಿಂಗ್ ಡೇ ನಿಮಿತ್ತ ಎನ್‌ಟಿಪಿಸಿ ಧ್ವಜ ಹಾರಿಸಿ ಮಾತನಾಡಿ, ಕರೊನಾ ಸೇರಿ ಸಾಂಕ್ರಾಮಿಕ ಸಮಯದಲ್ಲಿ ವಿಶೇಷವಾಗಿ ವೈದ್ಯರು, ಆರೋಗ್ಯ ಸಹಾಯಕರು ಹಾಗೂ ಸ್ಥಾವರದ ಆಪರೇಷನ್ ಮತ್ತು ನಿರ್ವಹಣೆ, ಪ್ರಾಜೆಕ್ಟ್ ಮತ್ತು ಸಪೋರ್ಟ್ ಸರ್ವೀಸ್ ಗ್ರೂಪ್ ಅಧಿಕಾರಿ, ಸಿಬ್ಬಂದಿ ವರ್ಗದ ಸೇವೆಯ ಗುಣಗಾನ ಮಾಡಿ ಆರಂಭದಿಂದ ಇಂದಿನವರೆಗೆ ಸಂಸ್ಥೆಯ ಇತಿಹಾಸ ಮತ್ತು ಬೆಳವಣಿಗೆ ವಿವರಿಸಿದರು.

    ಕೂಡಗಿ ಸ್ಥಾವರ ಪ್ರಸ್ತುತ 800 ಮೆಗಾವಾಟ್ ಸಾಮರ್ಥ್ಯದ ಕ್ರಿಟಿಕಲ್ ತಂತ್ರಜ್ಞಾನ ಮತ್ತು ಹೆಚ್ಚಿನ ದಕ್ಷತೆಯ ಮೂರು ಘಟಕಗಳನ್ನು ಹೊಂದಿದ್ದು, ಇದರಿಂದಾಗಿ ಹಾರುಬೂದಿಯ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪರಿಸರ ರಕ್ಷಿಸುತ್ತದೆ. ಕರ್ನಾಟಕದಲ್ಲಿ ಎನ್‌ಟಿಪಿಸಿಯ ಮೊಟ್ಟ ಮೊದಲ ಯೋಜನೆ ಇದಾಗಿದೆ ಎಂದರು.

    ಪ್ರೊಜೆಕ್ಟ್ ಜಿಎಂ ಬಿ.ಆರ್.ರಾವ್, ಜಿಎಂಎ್ಎಂ ಎಡಿಕೆ ಗುಪ್ತಾ, ಎಚ್‌ಆರ್ ವಿಭಾಗದ ಎಜಿಎಂ ವಿ. ಜಯನಾರಾಯಣನ್, ಡಿಜಿಎಂ ಡಾ. ಸುರೇಂದ್ರನ್ ಸೇರಿದಂತೆ ಹಲವು ಅಧಿಕಾರಿಗಳು, ನೌಕರರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts