More

    ಅಜ್ಜಿ ಹೆಸರಲ್ಲಿ ನಿರ್ಮಾಣ ಸಂಸ್ಥೆ … ಗುಲಾಬ್ ಪ್ರೊಡಕ್ಷನ್ಸ್​ನಿಂದ ಹೊರಬಂತು ‘Streets of ಬೆಂಗಳೂರು’

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ‘ಸಂತ ಶಿಶುನಾಳ ಷರೀಫ’, ‘ಮೈಸೂರು ಮಲ್ಲಿಗೆ’, ‘ನಾಗಮಂಡಲ’ ಮತ್ತು ‘ಅಲ್ಲಮ’ದಂತಹ ಅಪರೂಪದ ಚಿತ್ರಗಳನ್ನು ಕೊಟ್ಟವರು ಹರಿ ಎಲ್​. ಖೋಡೆ. ಅವರ ನಿಧನದ ನಂತರ, ಅವರ ಯಜಮಾನ್​ ಪ್ರೊಡಕ್ಷನ್ಸ್​ನಿಂದ ಯಾವೊಂದು ಚಿತ್ರ ಸಹ ನಿರ್ಮಾಣವಾಗದಿದ್ದರೂ, ಅವರ ಸಂಬಂಧಿ ಇದೀಗ ಹರಿ ಖೋಡೆ ಅವರ ಹಾದಿಯಲ್ಲಿ ಮುನ್ನಡೆದಿದ್ದಾರೆ.

    ಇದನ್ನೂ ಓದಿ: ಕರ್ಮದ ಕುರಿತ ‘ಮೆಟಡೊರ್​’ … ಒಂದೇ ಚಿತ್ರ; ಐದು ಕಥೆಗಳು

    ಹರಿ ಖೋಡೆ ಅವರ ಸಂಬಂಧಿ ಶ್ರೀಮತಿ ಗುಲಾಬ್ ಪದ್ಮನಾಭಸಾ ಖೋಡೆ ಅವರ ಸ್ಮರಣಾರ್ಥ ಅವರ ಮೊಮ್ಮಕ್ಕಳು ಇದೀಗ ಗುಲಾಬ್​ ಪ್ರೊಡಕ್ಷನ್ಸ್​ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಅದರ ಮೊದಲ ಪ್ರಯತ್ನವಾಗಿ ‘Streets of ಬೆಂಗಳೂರು’ ಎಂಬ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಮುಂದೆ ಚಿತ್ರ ನಿರ್ಮಾಣ ಮಾಡುವ ಆಶಯ ಕೂಡ ಈ ಸಂಸ್ಥೆ ಮುನ್ನಡೆಸುತ್ತಿರುವ ಅವರ ಮೊಮ್ಮಗ ಕೆ.ಆರ್​. ಕೃಷ್ಣ (ನಿಖಿಲ್​) ಅವರಿಗಿದೆ.

    ಇತ್ತೀಚೆಗೆ ‘ಗುಲಾಬ್ ಪ್ರೊಡಕ್ಷನ್ಸ್’ ಸಂಸ್ಥೆ ಅನಾವರಣ ನಡೆಯಿತು. ಕೃಷ್ಣ ಅವರ ತಾತಾ ಪದ್ಮನಾಭ ಸಾ ಖೋಡೆ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೆ.ಹೆಚ್ ಮುನಿಯಪ್ಪ, ಯೂತ್ ಕಾಂಗ್ರೆಸ್ ಮುಖಂಡರಾದ ಬಿ.ವಿ.ಶ್ರೀನಿವಾಸ್, ಲಹರಿ ವೇಲು, ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಕಲಾವಿದರಾದ ದೊಡ್ಡಣ್ಣ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಪ್ರಮಿಳಾ ಜೋಷಾಯ್​, ಕುಮಾರ್ ಗೋವಿಂದ್​, ಟೆನ್ನಿಸ್ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಆಗಮಿಸಿ ನೂತನ ನಿರ್ಮಾಣ ಸಂಸ್ಥೆಗೆ ಶುಭಕೋರಿದರು.

    ಇದನ್ನೂ ಓದಿ: ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

    ಇದೇ ಸಂದರ್ಭದಲ್ಲಿ ‘ಅನಂತಾಮೃತ” ಎಂಬ ಭಕ್ತಿಗೀತೆಗಳ ಧ್ವನಿಸಾಂದ್ರಿಕೆ ಸಹ ಬಿಡುಗಡೆಯಾಯಿತು. ಕೃಷ್ಣ ಅವರ ನಿರ್ಮಾಣದಲ್ಲಿ ಪ್ರೀತಮ್ ಶಿವಕುಮಾರ್ ನಿರ್ದೇಶಿಸಿರುವ 27 ನಿಮಿಷಗಳ ‘Streets of ಬೆಂಗಳೂರು” ಕಿರುಚಿತ್ರದ ಪ್ರದರ್ಶನ ಸಹ ನಡೆಯಿತು. ಈ ಕಿರುಚಿತ್ರದ ಮೂಲಕ ಪ್ರಜ್ವಲ್ ಗೌಡ ಎಂಬ ಯವನಟನನ್ನು ಗುಲಾಬ್ ಪ್ರೊಡಕ್ಷನ್ಸ್ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದೆ‌.

    ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ; ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts