More

    ಕಾಂಗ್ರೆಸ್​ಗೆ ಬಿಗ್​ ಶಾಕ್​​:​ ಗುಜರಾತಿನಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಸಾಧನೆ ಮಾಡಿದ ಬಿಜೆಪಿ

    ಅಹಮದಾಬಾದ್​: ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಜಿಕ್​ ನಂಬರ್​ ದಾಟಿ ಭರ್ಜರಿ ಗೆಲುವಿನತ್ತ ಬಿಜೆಪಿ ಮುನ್ನುಗ್ಗುತ್ತಿದೆ. ಆದರೆ, ಹಳೆಯ ಪಕ್ಷವಾದ ಕಾಂಗ್ರೆಸ್​ನ ಸಾಧನೆ ಹೀನಾಯವಾಗಿದ್ದು, ಕೇವಲ 20 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಗುಜರಾತ್​ನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಏರುವುದು ಖಚಿತವಾಗಿದ್ದು, ಈ ಚುನಾವಣೆಯಲ್ಲಿ ಹಲವು ದಾಖಲೆಗಳನ್ನು ಕಮಲ ಪಕ್ಷ ತನ್ನ ಹೆಸರಿಗೆ ಬರೆದುಕೊಂಡಿದೆ.

    2017ರ ಚುನಾವಣೆಯಲ್ಲಿ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಮಾತ್ರ ಗಳಿಸಿತ್ತು. ಆದರೆ, ಈ ಬಾರಿ ದಾಖಲೆ ಬರೆದಿರುವ ಬಿಜೆಪಿ 154 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈಗಾಗಲೇ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಧಿಕೃತವಾಗಿದೆ. ಈ ಬಾರಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಲ್ಲದೆ, ಮತ ಹಂಚಿಕೆಯಲ್ಲೂ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ.

    ಕಳೆದ ಬಾರಿಗೆ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್​ ಈ ಬಾರಿ ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ದೇಶದ ಅತ್ಯಂತ ಹಳೆಯ ಮತ್ತು ಪ್ರಬಲ ಪಕ್ಷ ಇಂದು ತುಂಬಾ ದುರ್ಬಲವಾಗಿದೆ. ಮತ ಹಂಚಿಕೆಯಲ್ಲೂ ಕಾಂಗ್ರೆಸ್​ ತೀವ್ರ ಕುಸಿತಕೊಂಡಿದೆ. ಬಿಜೆಪಿ ಶೇ. 55ಕ್ಕೂ ಹೆಚ್ಚು ಮತ ಗಳಿಕೆ ಹೊಂದಿದ್ದರೆ, ಕಾಂಗ್ರೆಸ್​ ಶೇ. 27ರಿಂದ 15ಕ್ಕೆ ಕುಸಿತ ಕಂಡಿದ್ದು, ಜನರ ವಿಶ್ವಾಸವನ್ನು ಕಳೆದುಕೊಂಡಿದೆ.

    ಈ ಬಾರಿ ಬಿಜೆಪಿಯ ಗಮನಾರ್ಹ ಸಾಧನೆ ಏನೆಂದರೆ, ಕಾಂಗ್ರೆಸ್​ ಪಾಬಲ್ಯವುಳ್ಳ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ತನ್ನ ಗೆಲುವಿನ ಖಾತೆ ತೆರೆದಿದೆ. ಅದರಲ್ಲೂ ಕಾಂಗ್ರೆಸ್​ನ ಮತಬ್ಯಾಂಕ್​ ಎಂದೇ ಪರಿಗಣನೆಯಾಗಿದ್ದ ಬುಡಕಟ್ಟು ಬೆಲ್ಟ್​ ಮತಗಳು ಈ ಬಾರಿ ಬಿಜೆಪಿ ಪಾಲಾಗಿವೆ. 1950ರಿಂದಲೂ ಬುಡಕಟ್ಟು ಪ್ರದೇಶದಲ್ಲಿ ಕಾಂಗ್ರೆಸ್​ ಪ್ರಭಾವ ಜಾಸ್ತಿ ಇತ್ತು. ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ ಬುಡಕಟ್ಟು ಏರಿಯಾದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿದ್ದು, ಗುಜರಾತ್​ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಸಾಬೀತು ಪಡಿಸಿದೆ.

    ಮತ ಎಣಿಕೆಯ ಸದ್ಯದ ಟ್ರೆಂಡ್​ ಪ್ರಕಾರ ಗುಜರಾತ್​ನಲ್ಲಿ ಆಡಳಿತಾರೂಢ ಬಿಜೆಪಿ 154 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್​ 20, ಎಎಪಿ 5 ಮತ್ತು ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್​ನಲ್ಲಿ ಅಧಿಕಾರ ರಚನೆಗೆ 92 ಮ್ಯಾಜಿಕ್​ ನಂಬರ್​ ಬೇಕಿದೆ. ಆದರೆ, ಬಿಜೆಪಿ ಈಗಾಗಲೇ ಮ್ಯಾಜಿಕ್​ ನಂಬರ್​ ದಾಟಿ ಮುಂದೆ ಸಾಗಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. (ಏಜೆನ್ಸೀಸ್​)

    ಗುಜರಾತ್​ ಮತ ಹಂಚಿಕೆಯಲ್ಲಿ ಭಾರಿ ಬದಲಾವಣೆ: ಬಿಜೆಪಿ ಮತ ಗಳಿಕೆಯಲ್ಲಿ ಏರಿಕೆ, ಕಾಂಗ್ರೆಸ್​ಗೆ ಮುಳ್ಳಾದ ಎಎಪಿ

    ಗುಜರಾತ್ ಫಲಿತಾಂಶ ಕರ್ನಾಟಕಕ್ಕೆ ಅನ್ವಯಿಸಲ್ಲ, ಸಿಎಂ ಹಗಲುಗನಸು ಕಾಣ್ತಿದ್ದಾರೆ: ಎಚ್​ಡಿಕೆ

    ಪ್ರಧಾನಿ ಮೋದಿ ಕರೆ ಮಾಡಿದ್ರೂ ಹಿ. ಪ್ರದೇಶ ಚುನಾವಣಾ ಕಣದಿಂದ ಹಿಂದೆ ಸರಿಯದ ಬಿಜೆಪಿ ರೆಬೆಲ್​ ನಾಯಕನಿಗೆ ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts