More

    ಪ್ರಧಾನಿ ಮೋದಿ ಕರೆ ಮಾಡಿದ್ರೂ ಹಿ. ಪ್ರದೇಶ ಚುನಾವಣಾ ಕಣದಿಂದ ಹಿಂದೆ ಸರಿಯದ ಬಿಜೆಪಿ ರೆಬೆಲ್​ ನಾಯಕನಿಗೆ ಶಾಕ್!​

    ಶಿಮ್ಲಾ/ನವದೆಹಲಿ: ಬಿಜೆಪಿಯಿಂದ ದಂಗೆ ಎದ್ದು, ಪ್ರಧಾನಿ ಮೋದಿ ಕರೆ ಮಾಡಿ ಮನವೊಲಿಸಲು ಪಯತ್ನಿಸಿದರೂ ಕೂಡ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಕಣದಿಂದ ಹಿಂದೆ ಸರಿಯದೇ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕೃಪಲ್​ ಪರ್ಮರ್​ಗೆ ಆಘಾತ ಎದುರಾಗಿದೆ.

    ಇಂದು ನಡೆದ ಮತಎಣಿಕೆಯಲ್ಲಿ ಕೃಪಾಲ್​ ಹಿನ್ನಡೆ ಅನುಭವಿಸಿದ್ದು, ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಫತೇಹ್​ಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. 63 ವರ್ಷದ ಪಾರ್ಮರ್​ ಅವರು ಮಾಜಿ ಬಿಜೆಪಿ ಸಂಸದ.

    ಫತೇಪುರ್​ ಉಪಚುನಾವಣೆಗೆ ಪಾರ್ಮರ್​ ಅವರನ್ನು ಪಕ್ಷ ಆಯ್ಕೆ ಮಾಡದಿದ್ದರಿಂದ ಕಳೆದ ವರ್ಷದಿಂದ ಪಕ್ಷದ ಮೇಲೆ ಪಾರ್ಮರ್​ ಅಸಮಾಧಾನ ಹೊಂದಿದ್ದರು. ಅಲ್ಲದೆ, ಶಾಲಾ ಅವಧಿಯಲ್ಲಿ ತನ್ನ ಮಾಜಿ ಸಹಪಾಠಿಯಾಗಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೇ ಬಂಡಾಯಕ್ಕೆ ಕಾರಣ ಎಂದು ದೂಷಿಸಿದ್ದರು. ಕಳೆದ 15 ವರ್ಷಗಳಿಂದ ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.

    ಇಷ್ಟೆಲ್ಲ ಕಾರಣದಿಂದ ಪ್ರಸ್ತುತ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಕರೆ ಮಾಡಿ ಪಾರ್ಮರ್​ ಅವರ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ, ಮೋದಿ ಅವರ ಮಾತಿಗೆ ಬಗ್ಗದ ಪಾರ್ಮರ್​ ಪಕ್ಷೇತರವಾಗಿಯೇ ಸ್ಪರ್ಧಿಸಿದ್ದರು. ಇದೀಗ ಮತಎಣಿಕೆಯಲ್ಲಿ ಪಾರ್ಮರ್​ ಹಿನ್ನಡೆ ಅನುಭವಿಸಿದ್ದು, ಸೋಲುವುದು ಬಹುತೇಕ ಖಚಿತವಾಗಿದೆ.

    ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮ್ಯಾಜಿಕ್​ ನಂಬರ್​ ದಾಟಿ ಬಹುಮತ ಸಾಧಿಸಿದ್ದು, ಅಧಿಕಾರ ಗದ್ದುಗೆ ಏರುವ ನಿರೀಕ್ಷೆಯಲ್ಲಿದೆ. ಸದ್ಯದ ಟ್ರೆಂಡ್​ ಪ್ರಕಾರ ಕಾಂಗ್ರೆಸ್​ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 28 ಸ್ಥಾನಗಳಲ್ಲಿ ಮುಂದಿದೆ. ಇತರೆ ಮೂರು ಮಂದಿ ಮುನ್ನಡೆ ಸಾಧಿಸಿದ್ದು, ಆ ಮೂವರು ಕೂಡ ಬಿಜೆಪಿ ರೆಬೆಲ್​ಗಳಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭಾ ಸ್ಥಾನಗಳಿದ್ದು, ಅಧಿಕಾರ ರಚನೆಗೆ 35 ಸ್ಥಾನಗಳು ಬೇಕಿದೆ. (ಏಜೆನ್ಸೀಸ್​)

    ಗುಜರಾತ್​ ಮತ ಹಂಚಿಕೆಯಲ್ಲಿ ಭಾರಿ ಬದಲಾವಣೆ: ಬಿಜೆಪಿ ಮತ ಗಳಿಕೆಯಲ್ಲಿ ಏರಿಕೆ, ಕಾಂಗ್ರೆಸ್​ಗೆ ಮುಳ್ಳಾದ ಎಎಪಿ

    ಗುಜರಾತ್​ನಲ್ಲಿ ಭರ್ಜರಿ ಗೆಲುವಿನತ್ತ ಬಿಜೆಪಿ: ಜಯಭೇರಿ ಬಾರಿಸಿದ ಸಿಎಂ ಭೂಪೇಂದ್ರ ಪಟೇಲ್​

    ದಿಲ್ಲಿಯಲ್ಲಿ ಗೆದ್ದು ಬೀಗಿದ್ದ ಆಪ್​ಗೆ ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಹಿನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts