More

    ರಿಂಗ ರಿಂಗ ರಿಂಗ.. ಹುಬ್ಬಳ್ಳಿ ಹುಡುಗಿಯ ಗಿನ್ನೆಸ್​ ದಾಖಲೆ?!

    ಹುಬ್ಬಳ್ಳಿ: ಸದ್ಯದಲ್ಲೇ ಈ ಹುಬ್ಬಳ್ಳಿ ಹುಡುಗಿಯ ಹೆಸರನ್ನು ಹಲವರು ‘ಸ್ತುತಿ’ಸಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಈ ಬಾಲಕಿ ಗಿನ್ನೆಸ್​ ದಾಖಲೆಯ ಪ್ರಯತ್ನವೊಂದನ್ನು ಮಾಡಿದ್ದು, ಸದ್ಯದಲ್ಲೇ ಈಕೆಯ ಹೆಸರು ಗಿನ್ನೆಸ್​ ಬುಕ್​ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗುವ ಸಾಧ್ಯತೆಗಳು ಗೋಚರಿಸಿವೆ.
    ಹೀಗೆ ದಾಖಲೆ ಪ್ರಯತ್ನವನ್ನು ಮಾಡಿರುವ ಬಾಲಕಿಯ ಹೆಸರು ಸ್ತುತಿ ಕುಲಕರ್ಣಿ. ಈಗೆ ಮೂರು ಹ್ಯೂಲಾ ಹೂಪ್​ ರಿಂಗ್​ಗಳನ್ನು ಹಾಕಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ ನೂರು ಮೀಟರ್ ದೂರವನ್ನು 23.35 ಸೆಕೆಂಡ್​ನಲ್ಲಿ ಕ್ರಮಿಸಿ ಸೈ ಎನಿಸಿಕೊಂಡಿದ್ದಾಳೆ. ಈ ಮೂಲಕ ಈಕೆ ಗಿನ್ನೆಸ್​ ದಾಖಲೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಏಕೆಂದರೆ ಇಂಥದ್ದೊಂದು ಪ್ರಯತ್ನದಲ್ಲಿ ಆಸ್ಟ್ರೇಲಿಯದ ಮಾರ್ವಾ ಎಂಬಾಕೆ 27 ಸೆಕೆಂಡ್​ನಲ್ಲಿ ಗುರಿ ತಲುಪಿದ್ದು, ಅದನ್ನು ಅದಕ್ಕೂ ಕಡಿಮೆ ಅವಧಿಯಲ್ಲಿ ಸ್ತುತಿ ಮಾಡಿ ಮುಗಿಸಿದ್ದಾಳೆ. ಹೀಗಾಗಿ ಇದು ಗಿನ್ನೆಸ್​ ಬುಕ್​ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಈಕೆಯ ಕೋಚ್ ಅಕ್ಷಯ ಸೂರ್ಯವಂಶಿ.

    ರಿಂಗ ರಿಂಗ ರಿಂಗ.. ಹುಬ್ಬಳ್ಳಿ ಹುಡುಗಿಯ ಗಿನ್ನೆಸ್​ ದಾಖಲೆ?!
    ಸ್ತುತಿ

    ಇದನ್ನೂ ಓದಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಸ್ತುತಿ ಈ ಸಾಧನೆ ಮಾಡಿದ್ದಾಳೆ. ಈ ದಾಖಲೆಯ ವಿವರವನ್ನು ಗಿನ್ನೆಸ್​ ರೆಕಾರ್ಡ್​ಗೆ ಕಳುಹಿಸಲಾಗುವುದು ಎಂದು ಸ್ತುತಿ ಪಾಲಕರಾದ ಕಿಶೋರ ಹಾಗೂ ರಶ್ಮಿ ತಿಳಿಸಿದ್ದಾರೆ. 

    ರಿಂಗ ರಿಂಗ ರಿಂಗ.. ಹುಬ್ಬಳ್ಳಿ ಹುಡುಗಿಯ ಗಿನ್ನೆಸ್​ ದಾಖಲೆ?!
    ಸ್ತುತಿಯಿಂದ ಗಿನ್ನೆಸ್ ದಾಖಲೆಯ ಪ್ರಯತ್ನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts