More

    ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ

    ಸಿಂಧನೂರು: ಬರಗಾಲದಲ್ಲಿ 11 ದಿನ ಪಂಪ್‌ಸೆಟ್ ಬಂದ್ ಮಾಡಿ ನೂರಾರು ಎಕರೆ ಬೆಳೆ ನಷ್ಟಕ್ಕೆ ಕಾರಣವಾಗಿರುವ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ತಹಸೀಲ್ದಾರ್ ಅರುಣ್ ದೇಸಾಯಿಗೆ ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಭಾನುವಾರ ಮನವಿ ಸಲ್ಲಿಸಿತು.

    ಬರಗಾಲದ ಈ ಸಂದರ್ಭದಲ್ಲಿ ನೀರಿಗೆ ತುಂಬಾ ಮಹತ್ವ ಇದ್ದು, ಈ ಕುರಿತು ಅರಿವು ಇದ್ದರೂ ಅಧಿಕಾರಿಗಳು ಬೆಳೆಗಳಿಗೆ ನೀರು ಹರಿಯದಂತೆ ನೋಡಿಕೊಂಡಿದ್ದಾರೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದಿರುವ ಜೋಳ ಹಾಗೂ ಇತರ ಬೆಳೆಗಳು ಒಣಗಿ ನಷ್ಟವಾಗಿದೆ. ಕೂಡಲೇ ಕ್ರಮಕ್ಕೆ ಮುಂದಾಗಬೇಕು ಹಾಗೂ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಕರ್ನಾಟಕ ರೈತ ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ, ತಾಲೂಕು ಅಧ್ಯಕ್ಷ ರಮೇಶ ಪಾಟೀಲ್, ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕಾರ್ಯದರ್ಶಿ ಚಿಟ್ಟಿ ಬಾಬು, ಎಂ.ಎಸ್.ರಾಜಶೇಖರ, ಗೋವಿಂದಪ್ಪ ಸುಕಾಲಪೇಟೆ, ಶಿವಪ್ಪ ಸುಕಾಲಪೇಟೆ, ಮಲ್ಲಯ ಸುಕಾಲಪೇಟೆ, ಹಿರಿಲಿಂಗಪ್ಪ ಸುಕಾಲಪೇಟೆ, ವೆಂಕಟೇಶ ಉದ್ಬಾಳ, ಬಾಲಾಜಿ ಉದ್ಬಾಳ, ಬಸವರಾಜ ಉದ್ಬಾಳ, ಯಂಕಪ್ಪ ಉದ್ಬಾಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts