More

    ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈ ಈಡೇರಿಸುವಂತೆ ಎಬಿವಿಪಿ ಮತ್ತು ಎಸ್​ಎಫ್​ಐ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಎಬಿವಿಪಿ ಮತ್ತು ಎಸ್​ಎಫ್​ಐ ಸಂಟನೆಗಳು ಗುರುವಾರ ಪ್ರತ್ಯೇಕವಾಗಿ ಗದಗ ನಗರದದಲ್ಲಿ ಪ್ರತಿಭಟನೆ ನಡೆಸಿದರು,
    ನಗರದ ರೋಟರಿ ವೃತ್ತದಲ್ಲಿ ಎಬಿವಿಪಿ ಸಂಟನೆ ಪ್ರತಿಭಟನೆ ನಡೆಸಿತು. ಎಬಿವಿಪಿ ನಗರ ಕಾರ್ಯದಶಿರ್ ನಿಖಿತಾ ಸುತಾರ ಮಾತನಾಡಿ, ರಾಜ್ಯದ ಅತಿಥಿ ಉಪನ್ಯಾಸಕರ ಪರವಾಗಿ ನೀತಿ ನಿಯಮಾವಳಿಗಳನ್ನು ರೂಪಿಸಿ, ಸೇವಾ ಭದ್ರತೆ ಒದಗಿಸಿ ಸಕಾಲಕ್ಕೆ ವೇತನವನ್ನು ನೀಡಿ ಅವರ ನ್ಯಾಯಯುತ ಬೇಡಿಕೆಗಳನ್ನು ಶ್ರೀವೆ ಬಗೆಹರಿಸಲು ಸರ್ಕಾರ ಮುಂದಾಗಬೇಕು. ತರಗತಿಗಳು ಸುಸಜ್ಜಿತವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

    ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಪ್ರತಿಭಟನೆ ನಡೆಸಿದ ಎಸ್​ಎ್​ಐ ಸಂಟನೆ ಪ್ರತಿಭಟನೆ ನಡೆಸಿತು. ಸಂಟನೆಯ ಪದಾಧಿಕಾರಿ ಗಣೇಶ ರಾಠೋಡ್​ ಮಾತನಾಡಿ, ಕೊರೋನ ಸಾಂಕ್ರಾಮಿಕ ಸಂದರ್ಭದಲ್ಲಿ ಖಾಸಗಿ ಕಾಲೇಜುಗಳ ಶುಲ್ಕವನ್ನು ಕಟ್ಟದೇ ವಿದ್ಯಾಥಿರ್ಗಳು ಖಾಸಗಿ ಕಾಲೇಜು ತೊರೆದು ಸರ್ಕಾರಿ ಕಾಲೇಜಿಗೆ ದಾಖಲಾಗಿದ್ದಾರೆ. ಈ ಮಧ್ಯಯೂ ಸಾಮಾಜಿಕ ಮತ್ತು ಆಥಿರ್ಕವಾಗಿ ಹಿಂದುಳಿದ ಹಾಗೂ ಸಮಯಕ್ಕೆ ಸರಿಯಾದ ಸಾರಿಗೆ ಸೌಲಭ್ಯವಿಲ್ಲದೆ ಗ್ರಾಮೀಣ ಭಾಗದಿಂದ ನಗರಕ್ಕೆ ಬಂದು ಸಾವಿರಾರು ವಿದ್ಯಾಥಿರ್ಗಳು ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ನಡೆಸಲು ಬರುತ್ತಿದ್ದಾರೆ. ಇಷ್ಟು ಕಷ್ಟಗಳ ನಡುವೆ ವಿದ್ಯಾಥಿರ್ಗಳಿಗೆ ಪಾಠ ಮಾಡಲು ಇಲ್ಲಿ ಅತಿಥಿ ಉಪನ್ಯಾಸಕರಿಲ್ಲ. ಸರ್ಕಾರ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಚ್ಚರಿಸಿದರು.

    ಸ್ಥಳಕ್ಕೆ ತಹಸೀಲ್ದಾರ ಆಗಮಿಸಿ ಪ್ರತಿಭಟನೆ ಹಿಂಪಡೆಯಲು ಯಶಸ್ವಿ ಆದರು. ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.
    ವಿದ್ಯಾಥಿರ್ನಿಯರಾದ ನೇಹಾ, ಪಲ್ಲವಿ, ಸುಜಾತಾ, ಶೈಲಾ, ಮಂಜುಳಾ, ವೀಣಾ, ಭಾರತಿ, ನೇತ್ರಾ, ಮೇಘಾ, ರಕ್ಷಿತಾ, ತನುಜಾ, ವಿಜಯಲಕ್ಷಿ$್ಮ, ಸುಮಾ, ಮಧು, ನೇತ್ರಾ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts