More

    ಭಕ್ತರ ಮನದಲ್ಲಿ ನೆಲೆಸಿದ ಗುಡ್ಡದಯಲ್ಲಮ್ಮ

    ನರಗುಂದ: ಶ್ರೀ ರೇಣುಕಾ ಯಲ್ಲಮ್ಮದೇವಿ ಎಲ್ಲ ಭಕ್ತರ ಮಾತೆಯಾಗಿ ಯಲ್ಲಮ್ಮ ಎಂಬ ರೂಢನಾಮದೊಂದಿಗೆ ಪ್ರಖ್ಯಾತಳಾ ಗಿದ್ದು, ಈ ನೆಲ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೇವತೆ, ಕಾಮಧೇನುವಾಗಿ ಇಷ್ಟಾರ್ಥ ಈಡೇರಿಸುವ ಐತಿಹಾಸಿಕ ಕರುಣಾಮಯಿ ತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

    ಸಮೀಪದ ಸುಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿ ಟ್ರಸ್ಟ್ ಹಾಗೂ ಶ್ರೀ ರೇಣುಕಾ ಯಲ್ಲಮ್ಮದೇವಿ ಅರ್ಚಕರ ಸಂಘದಿಂದ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ರೇಣುಕಾ ಯಲ್ಲಮ್ಮದೇವಿ ಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನರಗುಂದದ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ.ಬಿ.ಎಂ. ಜಾಬಣ್ಣವರ ರಚಿಸಿರುವ ಪುಸ್ತಕದಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿ ಕುರಿತಾದ ಎಲ್ಲ ಐತಿಹಾಸಿಕ ಸಂಗತಿಗಳನ್ನು ಕ್ರೋಡೀಕರಿಸಿ ಲೋಕಾರ್ಪಣೆಗೊಳಿಸಿರುವುದು ಅವಿಸ್ಮರಣೀಯ ದಿನವಾಗಿದೆ ಎಂದರು.

    ಕರ್ನಾಟಕ ಆದಿ ಬಣಜಿಗ ಸಂಘದ ಅಧ್ಯಕ್ಷ ಆರ್.ಬಿ. ಶಂಕರಗೌಡ್ರ, ನಿವೃತ್ತ ಮುಖ್ಯ ಶಿಕ್ಷಕ ವೈ.ಆರ್. ಚನ್ನಪ್ಪಗೌಡ್ರ, ಉಗರಗೋಳ ಪಿಕೆಪಿಎಸ್ ಸಂಘದ ಅಧ್ಯಕ್ಷ ರಾಮನಗೌಡ ತಿಪರಾಶಿ, ಬಸನಗೌಡ ಪಾಟೀಲ ಮಾತನಾಡಿದರು. ಡಾ.ಬಿ.ಎಂ. ಜಾಬಣ್ಣವರ ಅವರನ್ನು ಶ್ರೀ ರೇಣುಕಾ ಯಲ್ಲಮ್ಮದೇವಿ ಟ್ರಸ್ಟ್ ಹಾಗೂ ಶ್ರೀರೇಣುಕಾ ಯಲ್ಲಮ್ಮದೇವಿ ಅರ್ಚಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನಾ ಚೋಳಿನ, ನರಗುಂದದ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ಜಿ.ಬಿ. ಕುಲಕರ್ಣಿ, ಬಿ.ಕೆ. ಗುಜಮಾಗಡಿ, ವಿಜಯಕುಮಾರ ಬೇಲೇರಿ, ಇತರರಿದ್ದರು. ನಿಂಗನಗೌಡ ಕಾಳಿಂಗಗೌಡ್ರ, ಬಸವರಾಜ ಹಲಕುರ್ಕಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts