More

    ಖಾತ್ರಿ ಕೆಲಸದ ವೇಳೆ ಕಾರ್ಮಿಕ ಸಾವು: ಕಾನಹೊಸಹಳ್ಳಿ ಸಮೀಪದ ಹುರುಳಿಹಾಳ್ ಗ್ರಾಮದಲ್ಲಿ ಘಟನೆ

    ಕಾನಹೊಸಹಳ್ಳಿ: ಹುರುಳಿಹಾಳ್ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವಾಗ ಕಾರ್ಮಿಕ ಚಂದ್ರಪ್ಪ(36) ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಕೆಲಸ ಮಾಡುತ್ತಿರುವ ವೇಳೆ ಮೂರ್ಛೆ ಹೋಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ಸ್ಥಳೀಯ ಗ್ರಾಪಂನಿಂದ ನರೇಗಾ ಯೋಜನೆಯಡಿ 300ಕ್ಕೂ ಹೆಚ್ಚು ಕಾರ್ಮಿಕರು ಸೇರಿ ಹೂಳೆತ್ತುವ ಕಾಮಗಾರಿ ಮಾಡುತ್ತಿರುವಾಗ ಚಂದ್ರಪ್ಪ ಅಸ್ವಸ್ಥರಾಗಿದ್ದಾರೆ. ಹುರುಳಿಹಾಳ್ ಗ್ರಾಪಂ ಪಿಡಿಒ ಕವಿತಾ.ಕೆ.ವಿ, ಎಸ್‌ಐ ಗೋವಿಂದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಿಡಿಒ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

    ನರೇಗಾ ಯೋಜನೆಯಡಿ ಹೂಳೆತ್ತುವ ಕಾಮಗಾರಿ ಮಾಡುವಾಗ ಕಾರ್ಮಿಕ ಮೃತಪಟ್ಟಿದ್ದಾನೆ. ಮೃತ ಕಾರ್ಮಿಕನ ಕುಟುಂಬಕ್ಕೆ 75 ಸಾವಿರ ರೂ. ಪರಿಹಾರ ದೊರೆಯಲಿದೆ.
    ಜಿ.ಎಂ.ಬಸಣ್ಣ
    | ತಾಪಂ ಇಒ ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts